Site icon Suddi Belthangady

ಹೊಸಂಗಡಿ ಪಂಚಾಯತ್ ಉಪಚುನಾವಣೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನಿಲ್ ಶೆಟ್ಟಿ ನಾಮಪತ್ರ ಸಲ್ಲಿಕೆ

ಹೊಸಂಗಡಿ: ಪಂಚಾಯತ್ 3ನೇವಾರ್ಡ್ ಸದಸ್ಯ ದಿ. ಹರಿಪ್ರಸಾದ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುನಿಲ್ ಶೆಟ್ಟಿ ಮೇ. 13ರಂದು ಚುನಾವಣಾಧಿಕಾರಿ ಗಣೇಶ್ ರಾಮಚಂದ್ರ ಭಟ್ ರವರಿಗೆ ನಾಮಪತ್ರ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸಹಕರಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ನೇಮಯ್ಯ ಕುಲಾಲ್, ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕರುಣಾಕರ, ಮಾಜಿ ಉಪಾಧ್ಯಕ್ಷೆ ನಾಗರತ್ನ, ಪಂಚಾಯತ್ ಸದಸ್ಯ ಪ್ರಕಾಶ್ ದೇವಾಡಿಗ ಪ್ರಮುಖ ರಾದ ರಾಮಪ್ಪ ಪೂಜಾರಿ, ಪದ್ಮ ಪ್ರಸಾದ್, ರವಿಚಂದ್ರ ಶೆಟ್ಟಿ, ಸುಂದರ ಪೂಜಾರಿ, ಚಂದ್ರ ಶೇಖರ್ ಹರಿ ಓಂ, ಸತೀಶ್ ಶೆಟ್ಟಿ, ರೋಶನ್ ದೇವಸ, ಸಂದೀಪ್ ನೆಲ್ಲಿಗುಡ್ಡೆ, ಜಯರಾಜ ಮೊದಲಾದವರು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version