ಪುದುವೆಟ್ಟು: ಗ್ರಾಮ ಪಂಚಾಯತ್‌ನ ಪುದುವೆಟ್ಟು 1ನೇ ವಾರ್ಡ್ ಬಿಜೆಪಿ ಬೆಂಬಲಿತ ಸ್ಥಾನಕ್ಕೆ 156 ಬೂತ್ ಸಂಖ್ಯೆಯ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಬಿಜೆಪಿಯಿಂದ ಮೇ.14ರಂದು ಜಯಲಕ್ಷ್ಮಿರವರು ಚುನಾವಣಾಧಿಕಾರಿ ಗಣೇಶ್ ರವರಿಗೆ ನಾಮಪತ್ರ ಸಲ್ಲಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಪೂಣಾಕ್ಷಾ, ವನದುರ್ಗಾ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ನಿತ್ಯಾನಂದ ಗೌಡ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ಪುದುವೆಟ್ಟು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ಯಶವಂತ್ ಗೌಡ ಡೆಚ್ಚಾರು, ನಿರ್ದೇಶಕ ಪ್ರಸನ್ನ ಹೆಬ್ಬಾರ್, ಪ್ರಮುಖರಾದ ರಂಗನಾಥ್, ಸಜು, ಶ್ರೀಧರ್ ನಾಯರ್, ರೇಣುಕಾ, ಅಪ್ಪಿ, ಬಾಸ್ಕರ, ವನಿತಾ, ನಾರಾಯಣ ಪೂಜಾರಿ, ಅಣ್ಣು ಗೌಡ, ಆನಂದ ಗೌಡ ಕಲ್ಲಾಜೆ, ಕೃಷ್ಣಪ್ಪ ಪೂಜಾರಿ, ಚಂದ್ರಹಾಸ ಗೌಡ, ಹರೀಶ್, ಬಾಲಣ್ಣ ಗೌಡ, ಗಣೇಶ್ ಕಳೆಂಜ, ಪ್ರಮೋದ್ ದರ್ಖಾಸು, ಮೋಹನ್ ಗೌಡ ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ರವಿ ಎಮ್.ಬಿ. ಸಹಕರಿಸಿದರು.