Site icon Suddi Belthangady

ಪುದುವೆಟ್ಟು ಪಂಚಾಯತ್ ಉಪಚುನಾವಣೆ, ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಸಿಂಧೂ ಕೆ. ಎಸ್. ನಾಮಪತ್ರ ಸಲ್ಲಿಕೆ

ಪುದುವೆಟ್ಟು: ಪುದುವೆಟ್ಟು ಗ್ರಾಮ ಪಂಚಾಯತ್ 1ನೇ ವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ.14ರಂದು ಪುದುವೆಟ್ಟು ನಿವಾಸಿ, ಸಿಂಧೂ ಕೆ.ಎಸ್. ರವರು ಚುನಾವಣಾಧಿಕಾರಿ ಗಣೇಶ್ ರವರಿಗೆ ನಾಮಪತ್ರ ಸಲ್ಲಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಎಂ.ಬಿ. ಉಪಸ್ಥಿತರಿದ್ದರು.

ಪುದುವೆಟ್ಟು ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕೆ. ಸಿ., ಪಂಚಾಯತ್ ರಾಜ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಾಯ್ ಜೋಸೆಫ್, ಭೂ ನ್ಯಾಯ ಮಂಡಳಿ ಸದಸ್ಯ ಬೊಮ್ಮಣ್ಣ ಗೌಡ, ಮಠ ಮಾಜಿ ಎ.ಪಿ.ಎಂ.ಸಿ ಉಪಾಧ್ಯಕ್ಷ ಅಬ್ದುಲ್ ಗಪೂರ್, ವಾರ್ಡಿನ ಉಪಾಧ್ಯಕ್ಷ ಸಿ.ಪಿ. ಉಮ್ಮರ್, ಗ್ರಾಮ ಸಮಿತಿ ಉಪಾಧ್ಯಕ್ಷ ಅಪ್ಪಚ್ಚನ್, ಸದಸ್ಯ ಸುರೇಶ್ ದರ್ಕಾಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪಿಲಿಕಲ, ಗೋಪಾಲ ಪೂಜಾರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Exit mobile version