ಬೆಳ್ತಂಗಡಿ: ತಾಲೂಕು ಪಂಚಾಯತಿಯಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನರೇಗಾ ಮತ್ತು ತೆರಿಗೆ ವಸೂಲಾತಿಯಲ್ಲಿ ಗುರಿ ಸಾಧಿಸಿದ ಗ್ರಾಮ ಪಂಚಾಯತಿಗಳನ್ನು ಪ್ರಶಂಸಾ ಪತ್ರ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ನಿಗದಿತ ಗುರಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲು ಸೂಚಿಸಿದ್ದರು. ಕಳೆದ ವರ್ಷ ನರೇಗಾ ಯೋಜನೆಯಲ್ಲಿ 17555 ಮಾನವ ದಿನಗಳನ್ನು ಸೃಜಿಸಿದ ಬಂದಾರು ಮತ್ತು 15591 ಮಾನವ ದಿನಗಳನ್ನು ಸೃಜಿಸಿದ ಚಾರ್ಮಾಡಿ ಹಾಗೂ 2024-25ರ ಸಾಲಿನಲ್ಲಿ ಹಿಂದಿನ ಸಾಲಿನ ಬಾಕಿ ಸೇರಿ ಶೇ. 100 ತೆರಿಗೆ ವಸೂಲಿ ಮಾಡಿದ್ದ ನಾವೂರು ಸುಲ್ಕೇರಿ ಗ್ರಾಮ ಪಂಚಾಯತಿಗಳಿಗೆ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ನರೇಗಾ ಯೋಜನೆಯಡಿ 100% ಗುರಿ ಸಾಧಿಸಿದ ಕಳಿಯ, ಮರೋಡಿ, ಕೊಯ್ಯೂರು, ಕಲ್ಮoಜ, ಅರಸಿನಮಕ್ಕಿ ಹಾಗೂ 2024-25ರ ಸಾಲಿನ ತೆರಿಗೆಗಳ ಬೇಡಿಕೆಯಲ್ಲಿ 100% ತೆರಿಗೆ ವಸೂಲಿ ಮಾಡಿದ ಅಳದಂಗಡಿ, ಅಂಡಿಂಜೆ, ಆರಂಬೋಡಿ, ಬಳಂಜ, ಬಂದಾರು, ಬೆಳಾಲು,,ಬಾರ್ಯ, ಚಾರ್ಮಾಡಿ, ಇಳಂತಿಲ, ಇಂದಬೆಟ್ಟು, ಕಳಿಯ, ಕಲ್ಮಂಜ,,ಕುಕ್ಕೇಡಿ, ಕಾಶಿಪಟ್ಣ, ಮಚ್ಚಿನ, ಮಡಂತ್ಯಾರು, ಮುಂಡಾಜೆ, ಮಾಲಾಡಿ, ಮಲವಂತಿಗೆ, ಮರೋಡಿ, ಮೇಲಂತಬೆಟ್ಟು, ಮಿತ್ತಬಾಗಿಲು, ನಡ, ನಾರಾವಿ, ನೆರಿಯಾ, ನಿಡ್ಲೆ, ಪಡಂಗಡಿ, ಪಟ್ರಮೆ, ಶಿರ್ಲಾಲು, ತಣ್ಣೀರುಪಂತ, ತೆಕ್ಕಾರು, ಉಜಿರೆ, ವೇಣೂರು ಗ್ರಾಮ ಪಂಚಾಯಿತಿಗಳಿಗೆ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಸ್ಮರಣಿಕೆ ಮತ್ತು ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಿದರು. ಕಳೆದ ಸಾಲಿನ ಕನ್ನಡ ರಾಜ್ಯೋತ್ಸವದ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜಯಾನಂದರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಕಚೇರಿ ಅಧೀಕ್ಷಕ ಡಿ. ಪ್ರಶಾಂತ್ ಬಳಂಜ, ಪ್ರಭಾರ ಸಹಾಯಕ ಲೆಕ್ಕಾಧಿಕಾರಿ ಗಣೇಶ್ ಪೂಜಾರಿ, ಪ್ರಭಾರ ಸಹಾಯಕ ನಿರ್ದೇಶಕಿ (ನರೇಗಾ) ಸಫನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಿತ್ತಬಾಗಿಲು ಗ್ರಾಮ ಪಂಚಾಯತ್ ಪ್ರಭಾರ ಪಂ. ಅ. ಅಧಿಕಾರಿ ಮೋಹನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.