Site icon Suddi Belthangady

ಉದ್ಯೋಗ ಖಾತರಿ ಯೋಜನೆ: ಚಾರ್ಮಾಡಿ ಪಂಚಾಯತ್ ದ್ವಿತೀಯ

ಬೆಳ್ತಂಗಡಿ: 2024 -25 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 15591 ಮಾನವ ದಿನಗಳನ್ನು ಸೃಜಿಸಿದ ಚಾರ್ಮಾಡಿ ಗ್ರಾಮ ಪಂಚಾಯತ್ ದ್ವಿತೀಯ ಸ್ಥಾನ‌ ಪಡೆದಿದೆ.

ಪಂಚಾಯತ್ ನ ಅಧ್ಯಕ್ಷ, ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂಧಿ ವರ್ಗ ಹಾಗೂ ಸರ್ವ ಸದಸ್ಯರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್ ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.

Exit mobile version