ಬೆಳಾಲು: ಸ್ವಾಮಿ ಹಿಪ್ಪದಜ್ಜ ಮೂಲಸ್ಥಾನ, ಶ್ರೀ ಪಿಲಿಚಾಮುಂಡಿ ನಾಗ ಬ್ರಹ್ಮರ ಜೀರ್ಣೋದ್ಧಾರ ಸಮಿತಿ ಹಿಪ್ಪಬೈಲು ವತಿಯಿಂದ ಮೇ. 13ರಂದು ಹಿಪ್ಪಬೈಲಿನಲ್ಲಿ ಪೂರ್ವಜರು ಆರಾಧಿಸಿಕೊಂಡು ಬಂದಿರುವ
ಶ್ರೀ ಪಿಲಿಚಾಮುಂಡಿ, ರಕ್ತೇಶ್ವರಿ, ನಾಗದೇವರು ಮತ್ತು ಬ್ರಹ್ಮರು, ಕ್ಷೇತ್ರಪಾಲ ನಂದಿಗೋಣ -ಗುಳಿಗ ದೈವ ದೇವರ ಪ್ರತಿಷ್ಠಾ ಮಹೋತ್ಸವವು ಕಂಬದೋಡಿ ಬ್ರಹ್ಮಶ್ರೀ ಸೀತಾರಾಮ್ ಶಾಂತಿ ಇವರ ನೇತೃತ್ವದಲ್ಲಿ ಜರಗಿತು.
ಬೆಳಿಗ್ಗೆ ಸ್ವಸ್ತಿ ಪುಣ್ಯಾಹ, ಪ್ರಧಾನ ಹೋಮ, ಕಲಶ ಪೂಜೆ, ನಾಗ ಪ್ರತಿಷ್ಠಾಪನೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ನಾಗಬ್ರಹ್ಮರ ತನು ತಂಬಿಲ, ಪಿಲಿಚಾಮುಂಡಿಗೆ ಪಂಚಪರ್ವ, ಆಶ್ಲೇಷಾ ಬಲಿ, ಮಹಾ ಪೂಜೆ ಅನ್ನಸಂತರ್ಪಣೆ ನಡೆಯಿತು.
ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಸೂರಪ್ಪ ಪೂಜಾರಿ ಹಿಪ್ಪ, ಅಧ್ಯಕ್ಷ ಚೆನ್ನಪ್ಪ ಪೂಜಾರಿ ಹಿಪ್ಪ, ಉಪಾಧ್ಯಕ್ಷ ಗುರುವಪ್ಪ ಪೂಜಾರಿ, ಗಿರೀಶ ಪೂಜಾರಿ, ಕಾರ್ಯದರ್ಶಿ ರಮೇಶ್ ಪೂಜಾರಿ ಹೆಚ್., ಜತೆ ಕಾರ್ಯದರ್ಶಿ ಪೀತಾಂಬರ ಪೂಜಾರಿ ತಾರಗಂಡಿ, ಕೋಶಾಧಿಕಾರಿ ಹರೀಶ್ ಪೂಜಾರಿ ಹಿಪ್ಪ, ಹಿಪ್ಪಬೈಲಿನ ಸಮಿತಿಯ ಸದಸ್ಯರು, ಊರವರು, ಭಕ್ತರು ಹಾಜರಿದ್ದರು.