ಕಾಶಿಪಟ್ಣ: ಎಸ್.ಕೆ.ಎಸ್.ಎಸ್.ಎಫ್ ಶಾಖೆ ವತಿಯಿಂದ ಸಮಸ್ತ 100ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ, ಮೇ. 13ರಂದು ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಲಾಯಿತು.
ಸ್ಥಳೀಯ ಖತೀಬ ಎಸ್.ಎ.ಅಬೂಬಕ್ಕರ್ ನಿಝಾಮಿ ಸೋಮಂತ್ತಡ್ಕ ಪ್ರಾರ್ಥಿಸಿ, ಸಭೆಯನ್ನು ಉದ್ಘಾಟಿಸಿದರು. ಮದ್ರಸ ಮುಅಲ್ಲಿಮ್ ಅಕ್ಬರ್ ಅಲಿ ಅಝ್ಹರಿ ಸ್ವಾಗತಿಸಿದರು. ನಂತರ ಜಮಾಅತ್ ಅಧ್ಯಕ್ಷ ಕೆ.ಎಸ್. ಪುತ್ತುಮೋನು, ಪ್ರಧಾನ ಕಾರ್ಯದರ್ಶಿ ಪಿ.ಹೆಚ್. ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ಕೆ.ಎಸ್. ಇಸ್ಮಾಯಿಲ್, ಎಸ್.ಕೆ.ಎಸ್.ಎಸ್.ಎಫ್ ಶಾಖೆ ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಸಅದ್, ಶಾಖೆಯ ಸದಸ್ಯ ಕೆ.ಎಸ್. ಆಬಿದ್, ಹಾಗೂ ಜಮಾಅತ್ ಸದಸ್ಯರುಗಳು, ಮತ್ತು ಎಸ್.ಕೆ.ಎಸ್.ಎಸ್.ಎಫ್, ಎಸ್.ಕೆ.ಎಸ್.ಬಿ.ವಿ ಸದಸ್ಯರುಗಳು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ವಂದಿಸಿದರು. ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯವಾಯಿತು.