ಪುದುವೆಟ್ಟು: ಮೇ. 11 ರಂದು ಎಸ್.ಡಿ.ಎಮ್. ಶಾಲಾ ಮೈದಾನದಲ್ಲಿ ACL, BBL, BCL, KPL ಇದರ ಸಮಗ್ರ ಸಹಕಾರ ಹಾಗೂ ನೇತೃತ್ವದಲ್ಲಿ ಶ್ರೀ ದುರ್ಗಾ ಟ್ರೋಪಿ 4 ತಂಡಗಳ ಲೀಗ್ ಮಾದರಿಯ T10 ಕ್ರಿಕೆಟ್ ಪಂದ್ಯಾಕೂಟ ನಡೆಯಿತು.
ಪ್ರಥಮ ಸ್ಥಾನ ಪಡೆದ ಎಲೈಟ್ ಕೆಮ್ಮಟೆ ತಂಡ ಜಯಿಸಿದ್ದು ತಂಡದ 12 ಜನ ಆಟಗಾರರಿಗೆ ತಲಾ 10ಕೆಜಿ ಅಕ್ಕಿ ಹಾಗೂ ಶ್ರೀ ದುರ್ಗಾ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಜನನಿ ಬಲಂಗಡಿ ತಂಡದ 12 ಜನ ಆಟಗಾರರಿಗೆ ತಲಾ 5ಕೆಜಿ ಅಕ್ಕಿ ಹಾಗೂ ಶ್ರೀ ದುರ್ಗಾ ಟ್ರೋಫಿ, ಪಂದ್ಯಾಟದಲ್ಲಿ ಬೆಸ್ಟ್ ಬ್ಯಾಟ್ಸ್ ಮ್ಯಾನ್, ಬೆಸ್ಟ್ ಬೌಲರ್ ಹಾಗೂ ಮ್ಯಾನ್ ಆಫ್ ದಿ ಸೀರಿಸ್ ಹಾಗೂ ಪ್ರತಿ ಪಂದ್ಯಕ್ಕೂ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಮಿಯಾರು ಇದರ ಅಧ್ಯಕ್ಷ ಬೊಮ್ಮಣ್ಣ ಗೌಡ ವಹಿಸಿದ್ದು, ಗೌರವ ಉಪಸ್ಥಿತರಾಗಿ ಪುದುವೆಟ್ಟು ಗ್ರಾ.ಪ ಅಧ್ಯಕ್ಷ ಪೂರ್ಣಾಕ್ಷ, ಮಿಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಕಾರ್ಯದರ್ಶಿ ಸಂತೋಷ್ ಕೆ. ಸಿ., ವ್ಯವಸ್ಥಾಪನ ಸಮಿತಿ ಸದಸ್ಯೆ ಹರಿಣಾಕ್ಷಿ ರಘು ಪೂಜಾರಿ ಹಾಗೂ ಪುದುವೆಟ್ಟು ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ಯಶವಂತ್ ಗೌಡ ಡೆಚ್ಚಾರು, ಉದ್ಯಮಿಗಳಾದ ಚೇತನ್ ಮುಚ್ಚಾರು, ರಾಜೇಶ್ ಎಂ.ಕೆ ಭಾಗವಹಿಸಿದ್ದರು.