ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸೈನಿಕರಿಗಾಗಿ ವಿಶೇಷ ದುವಾ ಪ್ರಾರ್ಥನೆ ಮಾಡಲಾಯಿತು. ಈ ಪರಿಸ್ಥಿಯಲ್ಲಿ ಭಾರತೀಯರಾದ ನಾವು ಒಗ್ಗಟ್ಟಿನಲ್ಲಿದ್ದು ಯಾವುದೇ ತ್ಯಾಗಕ್ಕಾಗಿ ಸಿದ್ಧವಾಗಿರುವಂತೆ ಖತೀಬರು ಸಂದೇಶ ನೀಡಿದರು.
ಮಸೀದಿ ಖತೀಬ್ ಕಲಂದರ್ ಬಾಖವಿ ವಿಶೇಷ ಪ್ರಾರ್ಥನೆ ನೇತೃತ್ವ ವಹಿಸಿದ್ದರು. ಮಸೀದಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಗೌರವ ಅಧ್ಯಕ್ಷ ಖಾಲಿದ್ ಪುಲಬೆ, ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ, ಸಮಿತಿ ಸದಸ್ಯರಾದ ಇದ್ರಿಸ್ ಪುಲಬೆ, ಅಶ್ರಫ್ ಗಾಂಧಿ ನಗರ, ಅಶ್ರಫ್ ಕಿರೋಡಿ, ಪ್ರಮುಖರಾದ ಮಾಜಿ ಅಧ್ಯಕ್ಷ ಪಿ.ಎಸ್. ಜಲೀಲ್, ಮಪಾಜ್ ಕಾಲೇಜ್ ಪ್ರಿನ್ಸಿಪಾಲ್ ಪಿ.ಪಿ. ಅಹ್ಮದ್ ಸಖಾಫಿ, ಮೊಹಮ್ಮದ್ ಹೆಚ್. ವೇಣೂರು, ಹಮೀದ್ ಪೊಟ್ರೆ, ಯಾಕೂಬು ಪುಲಾಬೆ ಮತ್ತು ಅಪಾರ ಸಂಖ್ಯೆಯಲ್ಲಿ ಜಮಾತಿಗರು ಉಪಸ್ಥಿತರಿದ್ದರು.