Site icon Suddi Belthangady

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸೈನ್ಯದ ಅಭ್ಯುದಯಕ್ಕಾಗಿ ವಿಶೇಷ ಪ್ರಾರ್ಥನೆ

ನಿಡಿಗಲ್: ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಯುವಕರ ಕೊಲೆ ಮಾಡಿ ದೇಶದ ನಿದ್ದೆಗೆಡಿಸಿದ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆಯು ಕೈಗೊಂಡ ಆಪರೇಷನ್ ಸಿಂಧೂರದಲ್ಲಿ
ಭಾರತಾಂಬೆಯ ರಕ್ಷಣೆಗಾಗಿ ಎದೆಯೊಡ್ಡಿ ಹೋರಾಡಿ ಪಾಕಿಸ್ತಾನಿ ಸರಕಾರಕ್ಕೆ ತಕ್ಕ ಶಾಸ್ತಿಯನ್ನು ಮಾಡಿದ ಆ ಮೂಲಕ ಭಯೋತ್ಪಾದನೆಯನ್ನು ಈ ನೆಲದಿಂದಲೇ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಿದ ಭಾರತೀಯ ಸೈನ್ಯಕ್ಕೆ ಇನ್ನಷ್ಟು ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂಬ ಸದಾಶಯದಿಂದ ಮೇ. 12ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ಸಿಯಾಳಭಿಷೇಕ ಮಾಡುವ ಮೂಲಕ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮರಾಠೆ, ಅರ್ಚಕರು, ಸಮಿತಿ ಸದಸ್ಯರುಗಳು ಹಾಗೂ ಊರವರು ಉಪಸ್ಥಿತರಿದ್ದರು.

Exit mobile version