ಮಾಲಾಡಿ: ಗ್ರಾಮ ಪಂಚಾಯತ್ ಮಾಲಾಡಿ ಹಾಗೂ ಅರಿವು ಕೇಂದ್ರದ ಸಹಭಾಗಿತ್ವದಲ್ಲಿ ಒಂದು ವಾರದ ಕಾಲ ನಡೆದ ಮಕ್ಕಳ ಗ್ರಾಮೀಣ ಬೇಸಿಗೆ ಶಿಬಿರದ ಸಮರೋಪ ಸಮಾರಂಭವು ಮೇ. 12ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಿಬಿರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಪ್ರಸಂಶ ನಾಮಪತ್ರ ಹಾಗೂ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಪುಸ್ತಕ, ಪೆನ್ನು ವಿತರಿಸಲಾಯಿತು. ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಹಾಗೂ ಪಂಚಾಯತ್ ನ ಸದಸ್ಯರಾದ ಬೆನಡಿಕ್ಟ್ ಮಿರಾಂದ, ಐರಿನ್ ಮೊರಸ್, ವಸಂತ ಪೂಜಾರಿ ಹಾಗೂ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ರಾಜಶೇಖರ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಮ್ಯಾಥು ಎನ್. ಎಂ., ಹರೀಶ್ ವಿ., ಗ್ರಾಮ ಸಹಾಯಕ ಗುಣಕರ ಹೆಗ್ಡೆ, ಸಮುದಾಯ ಆರೋಗ್ಯ ಅಧಿಕಾರಿ ಜಯಶ್ರೀ, ಪಂಚಾಯತ್ ನ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮವು ಶಿಬಿರಾರ್ಥಿಗಳಾದ ಜೀವಿಕ ಶೆಟ್ಟಿ, ಲಹರಿ, ಪ್ರತೀಕ್ಷರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿದ್ದು, ನಿರೂಪಣೆಯನ್ನು ಗುಣಶ್ರೀ ಎಲ್. ಎಸ್., ಸ್ವಾಗತವನ್ನು ಸುಧಾಶ್ರೀ ನೆರವೇರಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಧನ್ಯವಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.