Site icon Suddi Belthangady

ವಿದ್ಯುತ್ ಇಲಾಖೆಗೆ ವರ್ತಕರ ಸಂಘದಿಂದ ಮನವಿ

ಬೆಳ್ತಂಗಡಿ: ಕೆಲವು ಸಮಯದಿಂದ ಅನಿಯಮಿತವಾಗಿ ವಿದ್ಯುತ್ ಹಲವು ಬಾರಿ ಕಡಿತವಾಗಿರುವುದಿಂದ ನಗರದ ವ್ಯಾಪಾರ ವ್ಯವಹಾರ ಮಾಡುವ ವರ್ತಕರಿಗೆ ಈ ಸಮಸ್ಯೆಯಿಂದ ಬಹಳಷ್ಟು ಕಷ್ಟ ನಷ್ಟಗಳಿಗೆ ಒಳಗಾಗುವ ನಿಟ್ಟಿನಲ್ಲಿ ಬೆಳ್ತಂಗಡಿ ಮೆಸ್ಕಾಂನ ಎಇ ಹಾಗೂ ಜೆಇ ಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.

ಬೆಳ್ತಂಗಡಿ ನಗರಕ್ಕೆ ಒಂದು ಫೀಡರ್ ಅಳವಡಿಸಿ ಈ ಸಮಸ್ಯೆಗೆ ಮುಕ್ತಿ ನೀಡಬೇಕಾಗಿ ಕೋರಿಕೆ ನೀಡಲಾಯಿತು. ಎಇ ಹಾಗೂ ಜೆಇ ಯವರು ಇನ್ನು ಮುಂದಕ್ಕೆ ಇಂತಹ ಸಮಸ್ಯೆಯಾಗದಂತೆ ಕ್ರಮವಹಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಮುಂದಿನ ವಾರ ಮಂಗಳೂರಿನಿಂದ ಅಧಿಕಾರಿಗಳು ಬರುವಾಗ ನಮ್ಮನ್ನು ಆಮಂತ್ರಿಸಿ ಖುದ್ದು ಅವರನ್ನು ಭೇಟಿ ಮಾಡಿಸುವುದಾಗಿ ತಿಳಿಸಿದ್ದಾರೆ.

ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ, ಕಾರ್ಯದರ್ಶಿ ಲ್ಯಾನ್ಸಿ ಎ. ಪಿರೇರಾ, ನಿಕಟ ಪೂರ್ವ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ವಿನ್ಸೆಂಟ್ ಡಿಸೋಜ, ಶಶಿಧರ್ ಪೈ, ಶೀತಲ್ ಜೈನ್ ಹಾಗೂ ಅಶೋಕ್ ಲಾಯಿಲಾ ಉಪಸ್ಥಿತರಿದ್ದರು.

Exit mobile version