ಬೆಳ್ತಂಗಡಿ: ಬೆಳಾಲು ಗ್ರಾಮದ ಕುಕ್ಕೊಟ್ಟು ನಿವಾಸಿ ವೀಣಾ(18ವ) ಎಂಬವರು ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ.10ರಂದು ಮಧ್ಯಾಹ್ನ 2 ಗಂಟೆಯಿಂದ ವೀಣಾ ಅವರು ಕಾಣೆಯಾಗಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ.19/2025ರಂತೆ ಮಹಿಳೆ ಕಾಣೆ ಪ್ರಕರಣ ದಾಖಲಾಗಿದೆ. 4 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ, ದುಂಡು ಮುಖ ಹೊಂದಿರುವ ವೀಣಾ ಅವರು ಬಿಳಿ ಬಣ್ಣದ ಗೆರೆಗಳಿರುವ ಚೂಡಿದಾರ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು.
ಇವರ ವಾರೀಸುದಾರರು ಅಥವಾ ಸಂಬಂಧಿಕರು ಇದ್ದರೆ ಧರ್ಮಸ್ಥಳ ಪೊಲೀಸ್ ಠಾಣೆ 08256277253, 7829808263, 8277986447 ಅಥವಾ 9480805336ರ ನಂಬರ್ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.