Site icon Suddi Belthangady

ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ

ಬೆಳ್ತಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 75ನೇ ಕಾರ್ಯಕ್ರಮವಾಗಿ ಗಾಂಡಿವ ನಿಂದನೆ
ತಾಳಮದ್ದಳೆ ಇಳಂತಿಲ ಗ್ರಾಮದ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು.

ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಸುರೇಶ್ ರಾವ್ ಬಿ., ನಿತೀಶ್ ಕುಮಾರ್ ವೈ, ಪದ್ಮನಾಭ ಕುಲಾಲ್ ಇಳಂತಿಲ ಹೀಮ್ಮೆಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಹಾಗೂ ಅರ್ಥಧಾರಿಗಳಾಗಿ ಜಬ್ಬಾರ್ ಸಮೊ (ಅರ್ಜುನ) ದಿವಾಕರ ಆಚಾರ್ಯ ಗೇರುಕಟ್ಟೆ( ಶ್ರೀ ಕೃಷ್ಣ ) ಶ್ರೀಧರ ಎಸ್ಪಿ ಸುರತ್ಕಲ್ ಮತ್ತು ಜಿನೇಂದ್ರ ಜೈನ್ ಬಳ್ಳಮಂಜ (ಧರ್ಮರಾಯ ) ಗೀತಾ ಕುದ್ದಣ್ಣಾಯ ಕರಾಯ(ಕರ್ಣ) ಪ್ರದೀಪ ಹೆಬ್ಬಾರ್ ಚಾರ (ಶಲ್ಯ ) ಪೂರ್ಣಿಮಾ ಪುತ್ತೂರಾಯ (ದ್ರೌಪದಿ ) ಭಾಗವಹಿಸಿದ್ದರು.

ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಅರ್ಥದಾರಿ ಜಬ್ಬಾರ್ ಸಮೋ ಅವರನ್ನು ಸನ್ಮಾನಿಸಲಾಯಿತು. ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಸುರೇಶ್ ಪುತ್ತುರಾಯ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ್ ಎಸ್.ಪಿ., ಪದ್ಮುಂಜ ಸಿಎ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಘುಪತಿ ಭಟ್ ಅನಾಬೆ, ತಿಲಕ್ ಉರುವಾಲು ಕಲಾವಿದರನ್ನು ಗೌರವಿಸಿದರು.

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು. ಸುಂದರ ಶೆಟ್ಟಿ ಇಳಂತಿಲ ಸ್ವಾಗತಿಸಿದರು. ಪೂರ್ಣಿಮಾ ಪುತ್ತುರಾಯ ವಂದಿಸಿದರು.

Exit mobile version