Site icon Suddi Belthangady

ಉಜಿರೆ ಹಳೆಪೇಟೆ ಮಸ್ಜಿದ್ ನಲ್ಲಿ ಭಾರತೀಯ ಸೇನೆಗೆ ನೈತಿಕ ಬೆಂಬಲ, ಪಹಲ್ಗಾಮ್ ದಾಳಿಯಲ್ಲಿ ಮಡಿದವರಿಗೆ ಪ್ರಾರ್ಥನೆ

ಬೆಳ್ತಂಗಡಿ: ಉಗ್ರರ ವಿರುದ್ಧ ಹೋರಾಡಿದ ಭಾರತೀಯ ಸೈನಿಕರಿಗೆ ಆತ್ಮಸ್ತೈರ್ಯ ತುಂಬುವ ಉದ್ದೇಶದಿಂದ ವಕ್ಫ್ ಸಚಿವ ಬಿ.ಝೆಡ್ ಝಮೀರ್ ಅಹಮದ್ ಅವರು ನೀಡಿದ ಸೂಚನೆಯಂತೆ ಉಜಿರೆ ಹಳೆಪೇಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಜೊತೆಗೆ ಇತ್ತೀಚೆಗೆ ಪಹಲ್ಗಾಮ್ ದಾಳಿಯಲ್ಲಿ ಉಗ್ರರಿಂದ ಹುತಾತ್ಮರಾದವರನ್ನೂ ಸ್ಮರಿಸಿ ಪ್ರಾರ್ಥಿಸಲಾಯಿತು.

ನೇತೃತ್ವವನ್ನು ಮಸ್ಜಿದ್ ಮುದರ್ರಿಸ್ ಮತ್ತು ಖತೀಬ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಕಾನಿ ಮುದರ್ರಿಸ್ ನೆರವೇರಿಸಿದರು. ಆಡಳಿತ ಸಮಿತಿಯವರು, ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

Exit mobile version