Site icon Suddi Belthangady

ನಾಳ ದೇವಸ್ಥಾನದಲ್ಲಿ ಬಿಜೆಪಿ ಗ್ರಾಮ ಸಮಿತಿ ವತಿಯಿಂದ ದುರ್ಗಾ ಪೂಜೆ

ಗೇರುಕಟ್ಟೆ: ಭಾರತೀಯ ಜನತಾ ಪಾರ್ಟಿ ಕಳಿಯ – ನ್ಯಾಯತರ್ಪು ಇದರ ವತಿಯಿಂದ ದೇಶಕ್ಕಾಗಿ ಹೋರಾಟವನ್ನು ಮಾಡುತ್ತಿರುವ ಯೋಧರಿಗೆ ದೈವಬಲದ ರಕ್ಷಣೆಗಾಗಿ ಮೇ. 11ರಂದು ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದುರ್ಗಾಪೂಜೆ ನಡೆಸಲಾಯಿತು.

ನಿವೃತ್ತ ಸೈನಿಕರಿಗೆ ತಿಲಕ ಧಾರಣೆ ಮಾಡಲಾಯಿತು. ಬಿಜೆಪಿ ಕಳಿಯ ಶಕ್ತಿಕೇಂದ್ರ ಪ್ರಮುಖ್ ಕರುಣಾಕರ ಕೊರಂಜ, ನ್ಯಾಯತರ್ಪು ಶಕ್ತಿಕೇಂದ್ರ ಪ್ರಮುಖ್, ಗ್ರಾ.ಪಂ. ಸದಸ್ಯ ವಿಜಯ ಕುಮಾರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹೇಮಂತ್ ಕುಮಾರ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ, ಕಳಿಯ ಸಹಕಾರ ಸಂಘದ ಅಧ್ಯಕ್ಷ ವಸಂತ ಮಜಲು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಭುವನೇಶ್ ಜಿ., ಮಾಜಿ ಸದಸ್ಯ ಜನಾರ್ಧನ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಗ್ರಾಮ‌ ಪಂಚಾಯತ್ ಸದಸ್ಯರಾದ ಸುಧಾಕರ ಮಜಲು, ಶುಭಾಷಿಣಿ ಕುಳಾಯಿ, ಯಶೋಧರ ಶೆಟ್ಡಿ ಕೊರಂಜ, ಕಳಿಯ ಸಹಕಾರ ಸಂಘದ ನಿರ್ದೇಶಕರಾದ ಶೇಖರ್ ನಾಯ್ಕ, ಕುಶಾಲಪ್ಪ ಗೌಡ, ಕೇಶವ ಪೂಜಾರಿ, ಗೋಪಾಲ ಬನ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಸಂದೀಪ್ ಗಾಣಿಗ ನಾಳ, ನವೀನ್ ಶೆಟ್ಟಿ, ಸಿದ್ದಪ್ಪ ಗೌಡ, ನಾಳ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಸೋಮಪ್ಪ ಕುಬಾಯ, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹರೀಶ್ ಗೌಡ, ನಿವೃತ್ತ ಯೋಧರಾದ ಸುಬ್ರಹ್ಮಣಿ, ವಿಕ್ರಂ ವಂಜಾರೆ, ದಿನೇಶ್ ಗೌಡ, ಪ್ರಮುಖರಾದ ಪುರಂದರ್ ಗೇರುಕಟ್ಟೆ, ರಾಜೇಶ್ ಪರಿಮ, ಸತೀಶ್ ಪರಿಮ, ಪ್ರಸನ್ನ ಮುಗುಳಿ, ಮುಂತಾದವರು ಉಪಸ್ಥಿತರಿದ್ದರು.

Exit mobile version