ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೊಯ್ಯ ಸಂಗಮ್ ವಿಹಾರ್ ಕುಟುಂಬಸ್ಥರು ಶುದ್ಧ ಕುಡಿಯುವ ನೀರಿನ ಘಟಕ ವಾಟರ್ ಕೂಲರ್ ಕೊಡುಗೆ ನೀಡಿದರು. ಕುಟುಂಬಸ್ಥರ ಪರವಾಗಿ ಆಗಮಿಸಿದ ಪದ್ಮುಂಜ ಹಾಲು ಉತ್ಪಾದಕರ ಸಂಘದ ಸಿಬ್ಬಂದಿ ಹೇಮಲತಾ ಪಿ. ಹಾಗೂ ಅಚಲ್ ಕುಮಾರ್ ಪಿ. ರವರು ಘಟಕವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಕೀರ್ತಿಯವರಿಗೆ ಹಸ್ತಾಂತರ ಮಾಡಿದರು.
ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ, ಎಸ್. ಡಿ. ಎಂ. ಸಿ ಅಧ್ಯಕ್ಷ ಪುರುಷೋತ್ತಮ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಕಾಸಿಂ ಪದ್ಮುಂಜ, ಸೇಸಮ್ಮ, ಸದಾಶಿವ ಶೆಟ್ಟಿ, ಸೌಮ್ಯ ಶಿಕ್ಷಕಿಯರಾದ ತೇಜಾ, ನಳಿನಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಕೀರ್ತಿ ಧನ್ಯವಾದ ಸಲ್ಲಿಸಿದರು.