Site icon Suddi Belthangady

ಅಳದಂಗಡಿ ನಿವಾಸಿ ಡೆನ್ನಿಸ್ ಪಿಂಟೋ ನಿಧನ

ಬೆಳ್ತಂಗಡಿ: ಅಳದಂಗಡಿ ಸಂತೆ ಮಾರುಕಟ್ಟೆಯಲ್ಲಿ
ವ್ಯಕ್ತಿಯೊಬ್ಬನ ಕುತ್ತಿಗೆ ಹಾಗೂ ಎದೆಗೆ ಚೂರಿಯಿಂದ ಇರಿದು ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ಏ. 26ರಂದು ನಡೆದಿತ್ತು. ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆನ್ನಿಸ್ ಪಿಂಟೋ ಎಂಬಾತನೆ ಹಲ್ಲೆಗೆ ಒಳಗಾದ ವ್ಯಕ್ತಿಯಾಗಿದ್ದರು.

ಸ್ಥಳೀಯ ನಿವಾಸಿ ಶೀನ ಎಂಬವನೇ ಆರೋಪಿಯಾಗಿದ್ದಾನೆ. ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಎ. 26ರಂದು ರಾತ್ರಿಯ ವೇಳೆ ಕ್ಷುಲ್ಲಕ ಕಾರಣಕ್ಕೆ ಆರೋಪಿ ಶೀನ ಎಂಬಾತ ಹಾಗೂ ಡೆನ್ನಿಸ್ ಪಿಂಟೋ ನಡುವೆ ಮಾತಿನ ಚಕಮಕಿ ನಡೆದಿತ್ತು.

ಈ ವೇಳೆ ಶೀನ ಡೆನ್ನಿಸ್ ಅನ್ನು ನೆಲಕ್ಕೆ ದೂಡಿ ಹಾಕಿ ಆತನ ಮೇಲೆ ಹತ್ತಿ ಕುಳಿತು ಕುತ್ತಿಗೆಗೆ ಹಾಗೂ ಎಡಗೈ ರಟ್ಟೆಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಡೆನ್ನಿಸ್ ಪಿಂಟೊ ಅವರ ಕುತ್ತಿಗೆಗೆ ಗಂಭೀರವಾಗಿ ಗಾಯಗಳಾಗಿದೆ. ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿತ್ತು. ಚಿಕೆತ್ಸೆ ಪಡೆಯುತ್ತಿದ ಡೇನಿಸ್ ಪಿಂಟೋ ಚಿಕಿತ್ಸೆ ಫಲಕಾರಿಯಾಗದೆ ಮೇ.9ರಂದು ಮೃತ ಪಟ್ಟಿದ್ದಾರೆ.

Exit mobile version