Site icon Suddi Belthangady

ಬೆಳ್ತಂಗಡಿ ಯುವತಿಯಿಂದ ಸೇನೆಯ ಆಪರೇಷನ್ ಸಿಂದೂರಕ್ಕೆ ಧಿಕ್ಕಾರ ಪೋಸ್ಟ್-ಕೇಸ್ ದಾಖಲಿಸಲು ಒತ್ತಾಯ-ಎಬಿವಿಪಿ‌ ಖಂಡನೆ

ಬೆಳ್ತಂಗಡಿ: ಉಗ್ರರ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂದೂರ್ ಬಗ್ಗೆ ದೇಶ ಹೆಮ್ಮೆ ಪಡುತ್ತಿರುವಾಗ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳ್ತಂಗಡಿಯ ಬೆಳಾಲಿನ, ಕಾಲೇಜು ವಿದ್ಯಾರ್ಥಿನಿಯ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವಿದ್ಯಾರ್ಥಿನಿ ರೇಷ್ಮಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ “ಆಪರೇಷನ್ ಸಿಂದೂರ್” ಕುರಿತ ಪೋಸ್ಟ್‌ ವೈರಲ್ ಆಗಿದೆ. ಪೋಸ್ಟ್‌ನಲ್ಲಿ ಬಳಸಿದ ಭಾಷೆ ಮತ್ತು ಹ್ಯಾಶ್‌ಟ್ಯಾಗ್‌ಗಳು ವಿವಾದಕ್ಕೆ ಕಾರಣವಾಗಿವೆ. ಅಪರೇಷನ್ ಸಿಂದೂರ್ ಗೆ ಧಿಕ್ಕಾರ ಎಂಬ ಹ್ಯಾಶ್ ಟ್ಯಾಗ್ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪೋಸ್ಟ್ ಗೆ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ರೇಷ್ಮಾ ತಮ್ಮ ಪೋಸ್ಟ್‌ ಡಿಲೀಟ್ ಮಾಡಿರುವುದಾಗಿ ತಿಳಿದುಬಂದಿದೆ. ವಿದ್ಯಾರ್ಥಿನಿಯ ಅಮಾನತಿಗೆ ಎಬಿವಿಪಿ ಒತ್ತಾಯ. ಮಂಗಳೂರು ವಿವಿಯ ಕನ್ನಡ ವಿಭಾಗದ ವಿದ್ಯಾರ್ಥಿನಿ ರೇಷ್ಮಾಳನ್ನು ಅಮಾನುತುಗೊಳಿಸುವಂತೆ ಮಂಗಳೂರು ವಿವಿ ಎಬಿವಿಪಿ ಒತ್ತಾಯ ಮಾಡಿದ್ದು ಮನವಿ ಸಲ್ಲಿಸಿದೆ. ಇಂತಹ ದೇಶದ್ರೋಹದ ಮನಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲೇ ಹೊಸುಕಿ ಹಾಕುವಂತೆ ಒತ್ತಾಯಿಸಿದ್ದಾರೆ.

Exit mobile version