Site icon Suddi Belthangady

ಆಪರೇಷನ್ ಸಿಂಧೂರ : ಉಜಿರೆ ಸೊಸೈಟಿಯ ಅಧಿಕಾರ ಹಿಡಿದ ಕಾಂಗ್ರೆಸ್‌ನಿಂದ ಸಂಭ್ರಮಾಚರಣೆ

ಉಜಿರೆ : ಉಜಿರೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಸಿದ ನಂತರ ಉಜಿರೆ ಪೇಟೆಯವರೆಗೆ ಮೆರವಣಿಗೆ ನಡೆಸಿತು. ಈ ವೇಳೆ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಹಷ ವ್ಯಕ್ತಪಡಿಸಿದ ಕಾಂಗ್ರೆಸಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಉಜಿರೆಯಲ್ಲಿ ಒಂದೇ ದಿನ ಎರಡು ಕಾರಣಕ್ಕೆ ಸಂಭ್ರಮಿಸುವ ಕ್ಷಣ ಬಂದಿರುವುದು ಕಾಕತಾಳೀಯ ಎಂದು ಹೇಳಿದರು. ಈ ವೇಳೆ, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್, ಸತೀಶ್ ಕಾಶಿಪಟ್ಣ, ನಮಿತಾ ಪೂಜಾರಿ, ಉಜಿರೆ ಸೊಸೈಟಿಯ ಅಧ್ಯಕ್ಷ ಬಾಲಕೃಷ ಕೇರಿಮಾರು, ಉಪಾಧ್ಯಕ್ಷ, ನಿರ್ದೇಶಕರುಗಳು ಉಪಸ್ಥಿತರಿದ್ದರು.

Exit mobile version