Site icon Suddi Belthangady

ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ- ಪೀತಾಂಬರ ಹೇರಾಜೆ

ಬೆಳ್ತಂಗಡಿ: ಸಿಂಧೂರ್ ಅರ್ಥಪೂರ್ಣವಾದ ಆಪರೇಷನ್ ಹಲವಾರು ದಶಕಗಳಿಂದ ಭಾರತ ದೇಶದಲ್ಲಿ ಉಗ್ರವಾದಕ್ಕೆ ಪ್ರಚೋದನೆ ನೀಡುತ್ತಿದ್ದ ಪಾಕಿಸ್ತಾನ ಸರಕಾರ, ಸೈನಿಕರು, ಹಾಗೂ ಅವರಿಗೆ ಸಹಕರಿಸುತ್ತಿರುವ ಉಗ್ರರಿಂದಾಗಿ ಶಾಂತಿಪ್ರಿಯ ಭಾರತ ದೇಶದ ಆರ್ಥಿಕತೆಗೆ ಮತ್ತು ಕೋಮು ಸಾಮರಸ್ಯಕ್ಕೆ ಸವಾಲಾಗಿರುವ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡುವ ಅಗತ್ಯ ಖಂಡಿತ ಇದೆ.

ಉಗ್ರವಾದಕ್ಕೆ ಸಹಕರಿಸುವ ಪೋಷಿಸುವ ಯಾವುದೇ ಸರ್ಕಾರ ಅಥವಾ ಜನರು ಭೂಮಿಯಲ್ಲಿ ಬದುಕಲು ಯೋಗ್ಯರಲ್ಲ. ಉಗ್ರವಾದವನ್ನು ಬೇರು ಸಹಿತ ಮಟ್ಟ ಹಾಕಲು ಭಾರತೀಯರೆಲ್ಲರೂ ಜಾತಿ ಮತ ಪಂಥ ಭೇದ ಮರೆತು ಒಂದಾಗಲು ಇದೊಂದು ಸಕಾಲ. ಪಾಕಿಸ್ತಾನದ ಜನರಿಗೆ ಉಣ್ಣಲು ಗತಿಯಿಲ್ಲದಿದ್ದರೂ ಭಯೋತ್ಪಾದನೆಯಲ್ಲಿ ನಿರತರಾಗಿರುವುದು ಒಂದು ಶಾಪ. ಭಯೋತ್ಪಾದನೆಯ ಸಂಪೂರ್ಣ ಉಚ್ಛಾಟನೆ ಆಗಲೇಬೇಕು ಪಾಕಿಸ್ತಾನ ನಿರ್ನಾಮ ಆಗಲೇಬೇಕು. ಏ. 22ರಂದು ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನದ ಉಗ್ರರ ಪೈಶಾಚಿಕ ದಾಳಿಯ ನೆನಪಿಗಾಗಿ ನಡೆದ ಸಿಂಧೂರ ಆಪರೇಷನ್ ಅರ್ಥಪೂರ್ಣ. ಭಾರತೀಯ ಸೇನೆಗೆ ಅಭಿನಂದನೆಗಳು.- ಪೀತಾಂಬರ ಹೆರಾಜೆ ನಿವೃತ್ತ ಎಸ್ ಪಿ.

Exit mobile version