ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿಯ ವತಿಯಿಂದ ಮೇ. 17ರಿಂದ 23ರವರೆಗೆ ಪ್ರತಿದಿನ ಸಂಜೆ ಗಂಟೆ 6.00 ರಿಂದ 8.00ರವರೆಗೆ
ಬೆಳ್ತಂಗಡಿ ಸಮಾಜ ಮಂದಿರದಲ್ಲಿ ವೀಣಾ ಬನ್ನಂಜೆ ಇವರಿಂದ ಭಗವದ್ಗೀತ ಪ್ರವಚನ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಉದ್ಘಾಟನೆಯನ್ನು ಸೋನಿಯಾ ಯಶೋವರ್ಮ ಉಜಿರೆ ಇವರು ನೆರವೇರಿಸಲಿದ್ದಾರೆ. ನಾವೂರು ಅರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್ ಆಟಿಕುಕ್ಕೆ, ಗೇರುಕಟ್ಟೆಯ ಹಿರಿಯ ಕೃಷಿಕ ಎಂ. ಜನಾರ್ದನ ಪೂಜಾರಿ ಗೌರವ ಉಪಸ್ಥಿತರಿರುವರು. ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದ ಜೊತೆಗೆ ರೋಟರಿ ಕ್ಲಬ್ ಬೆಳ್ತಂಗಡಿ, ಲಯನ್ ಕ್ಲಬ್ ಬೆಳ್ತಂಗಡಿ, ಮಂಜುಶ್ರೀ ಜೆಸಿಐ ಬೆಳ್ತಂಗಡಿ, ಶ್ರೀ ಜನಾರ್ದನ ಸ್ವಾಮಿ ಸೇವಾ ಟ್ರಸ್ಟ್ ಉಜಿರೆ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳಂಗಡಿ, ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಪ್ರಗತಿ ಮಹಿಳಾ ಮಂಡಲ ಉಜಿರೆ, ತುಳು ಶಿವಳ್ಳಿ ಮಹಾಸಭಾ ಬೆಳ್ತಂಗಡಿ ತಾಲೂಕು, ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್, ಮಂಜುಶ್ರೀ ಪ್ರಿಂಟರ್ಸ್ ಉಜಿರೆ ಮೊದಲಾದ ಸಂಘಟನೆಗಳು ಸಹಕಾರ ನೀಡಲಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.