Site icon Suddi Belthangady

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ–ಮಕ್ಕಳ ರಜಾ ಶಿಬಿರ 2025: ಉಚಿತ ಪುಸ್ತಕ ವಿತರಣೆಯೊಂದಿಗೆ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಹಾಗೂ ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಮಕ್ಕಳ ರಜಾ ಶಿಬಿರ – 2025, ಮೇ. 7ರಂದು ಬೆಳ್ತಂಗಡಿಯ ಸಾಂತೋಮ್ ಟವರ್‌ನಲ್ಲಿ ಆಯೋಜಿಸಲಾಯಿತು. ಈ ಶಿಬಿರದಲ್ಲಿ ಹೆಚ್‌ಐವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ಮಕ್ಕಳಿಗಾಗಿ, ಮಾಹಿತಿ ಪತ್ರ ಹಾಗೂ ಉಚಿತ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಲಿತಾ ವಹಿಸಿದ್ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಸಹಾಯಕ ಪ್ರಾಧ್ಯಾಪಕ ಕುಶಾಲಪ್ಪ ಎಸ್. ಶಿಬಿರವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಮೀಡಿಯಾ ಅಪೋಸ್ಟಲೇಟ್ ನಿರ್ದೇಶಕ ಫಾ. ಮ್ಯಾಥ್ಯೂ ತಾಯೆಕಾಟ್ಟಿಲ್ ಹಾಗೂ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಎಂ.ಎಸ್.ಡಬ್ಲ್ಯೂ ವಿಭಾಗದ ಸಹಾಯಕ ಪ್ರಾಧ್ಯಾಪಕ ಧನೇಶ್ವರಿ ಅವರು ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜ್ಞಾನನಿಲಯ ಬೆಳ್ತಂಗಡಿಯ ನಿರ್ದೇಶಕ ಫಾ. ಜೋಸೆಫ್ ಮಟ್ಟಂ ಅವರು ಮಕ್ಕಳಿಗೆ ಉಚಿತ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ಫಾ. ಬಿನೋಯಿ ಎ.ಜೆ. ಅವರು ಪ್ರಾಸ್ತಾವಿಕ ನುಡಿಯನ್ನಾಡಿದರು.

ನವಜೀವನ ಆರೈಕೆ ಹಾಗೂ ಬೆಂಬಲ ಕೇಂದ್ರದ ಸದಸ್ಯರಾದ ಶಾರದಾ ಮತ್ತು ಪುಷ್ಪಾ ಪ್ರಾರ್ಥನೆ ನೆರವೇದಿಸಿದರು. ಡಿ. ಕೆ. ಆರ್. ಡಿ ಎಸ್ ಸಂಸ್ಥೆಯ ಸಿಬ್ಬಂದಿ ಸಿಸಿಲಿಯಾ ತಾವ್ರೊ ಸ್ವಾಗತಿಸಿದರು. ಮಾರ್ಕ್ ಡಿಸೋಜ ಕಾರ್ಯಕ್ರಮವನ್ನು ನಿರೂಪಿಸಿದರು. ಸಿಬ್ಬಂದಿಗಳಾದ ಶ್ರೇಯಾ, ಸುನಿಲ್ ಹಾಗೂ ಜಾನ್ಸನ್ ಇವರು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಜಿನಿ ಪಿ.ಜೆ. ಧನ್ಯವಾದ ಸಮರ್ಪಿಸಿದರು.

Exit mobile version