ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಕಳೆದ ಮೂರು ವರ್ಷದಿಂದ ಶಾಖಾಧಿಕಾರಿಯಾಗಿದ್ದು ಉಡುಪಿಗೆ ವರ್ಗಾವಣೆಗೊಂಡ ವಿ. ಎಸ್. ಕುಮಾರ್ ಇವರಿಗೆ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಮೇ. 8ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.
ಉಪಗ್ರಹ ಶಾಖೆಯ ಆಡಳಿತಾಧಿಕಾರಿ ಹರಿಶ್ಚಂದ್ರ, ಬಂಟ್ವಾಳ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್, ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ಧಿ ಅಧಿಕಾರಿಗಳಾದ ಎಂ. ವಿ. ಶೆಟ್ಟಿ, ಟಿ. ಡಿ. ರಾಘವೇಂದ್ರ, ಉದಯ ಶಂಕರ್, ಸಂದೀಪ್, ವಿಮಾ ಪ್ರತಿನಿಧಿಗಳಾದ ರಾಜೇಶ್ ಪೂಜಾರಿ ಮೂಡುಕೋಡಿ, ಪುಷ್ಪ ರಾಜ್ ಹೆಗ್ಡೆ, ಶ್ರೀಕಾಂತ ಕಾಮತ್, ಧರಣೇ0ದ್ರ ಜೈನ್, ಜಾನ್ ವಿಲಿಯಮ್, ಲೋಕೇಶ್ವರಿ ವಿನಯಚಂದ್ರ, ಲೋಕೇಶ್ ಶೆಟ್ಟಿ, ಕೆ. ರಮೇಶ್ ಬಂಗೇರ, ಜಯರಾಮ ಭಂಡಾರಿ ಶುಭ ಹಾರೈಸಿದರು.
ವಿ. ಎಸ್. ಕುಮಾರ್ ರವರನ್ನು ಬೆಳ್ತಂಗಡಿ ಉಪಗ್ರಹ ಶಾಖೆಯ ಅಭಿವೃದ್ಧಿ ಅಧಿಕಾರಿಗಳು ಪ್ರತಿನಿಧಿಗಳ ವತಿಯಿಂದ ಕಿರು ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರತಿನಿಧಿಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.