ಪಟ್ರಮೆ: ಪಟ್ಟೂರು ಪುಂಡಿಕಾಯಿ ತಿರುವಿನಲ್ಲಿ ಗೂಡ್ಸ್ ರಿಕ್ಷಾ ಮತ್ತು ಜೀಪು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಮೇ. 8ರಂದು ನಡೆದಿದೆ. ಡಿಕ್ಕಿಯ ರಭಸಕ್ಕೆ ಜೀಪ್ ನಲ್ಲಿದ್ದ ಸುಂದರಿ, ಗಿರಿಜಾ,ಲಲಿತ ಮತ್ತು ರಿಕ್ಷಾ ಡ್ರೈವರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣ ಕೊಕ್ಕಡ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿಕ್ಷಾ ಮಲ್ಲಿಗೆ ಮಜಲು ಸಿದ್ದಿಕ್ ರವರಿಗೆ ಸೇರಿದ್ದಾಗಿದ್ದು ಜೀಪ್ ದಿಡುಪೆಯಿಂದ ಮಾಡವು ಕಡೆಗೆ ಕಾರ್ಯಕ್ರಮದ ನಿಮಿತ್ತ ತೆರಳುತ್ತಿದ್ದು ಈ ಸಂಧರ್ಭದಲ್ಲಿ ಡಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಪಟ್ಟೂರು ಸಮೀಪ ಜೀಪು ಮತ್ತು ಗೂಡ್ಸ್ ರಿಕ್ಷಾ ಡಿಕ್ಕಿ
