Site icon Suddi Belthangady

ಜ್ಯೋತಿ ಆಸ್ಪತ್ರೆ ಬೆಳ್ತಂಗಡಿಯಲ್ಲಿ ತುರ್ತು ಮತ್ತು ಅಪಘಾತ ಚಿಕಿತ್ಸಾ ಘಟಕದ ಉದ್ಘಾಟನೆ

ಬೆಳ್ತಂಗಡಿ: ಆರೋಗ್ಯ ಸಂರಕ್ಷಣೆಗೆ ನಿಮ್ಮ ಕುಟುಂಬ ಜ್ಯೋತಿ ಆಸ್ಪತ್ರೆ, ಲಾಯಿಲ ಮತ್ತು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ, ತುರ್ತು ಮತ್ತು ಅಪಘಾತ ಚಿಕಿತ್ಸಾ ಘಟಕವನ್ನು 2025ರ ಏ. 7ರಂದು ಉದ್ಘಾಟಿಸಲಾಗಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಮಾರ್ ಲಾರೆನ್ಸ್ ಮುಕ್ಕುಯಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಸ್ಥಾಪಕ ರಕ್ಷಿತ್ ಶಿವರಾಮ್, ಕೆ.ಎಂ.ಸಿ ಆಸ್ಪತ್ರೆ ಮಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಗೀರ್ ಸಿದ್ಧಿಕಿ, ಡಾ. ಜೀದು ರಾಧಾಕೃಷ್ಣನ್ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಅಧಿಕಾರಿ ಪ್ರಿಯಾ ಚಾಕೋ ಮತ್ತಿತರರು ಭಾಗವಹಿಸಿದರು.

ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಾತ್ ರವರು, ಸ್ವಾಗತ ಭಾಷಣವನ್ನು ಮಾಡಿದ ಡಾ.ಆನ್ ಗ್ರೇಸ್ ರವರ ಮಾತುಗಳನ್ನು ಉಲ್ಲೆಕಿಸಿ, ” ಲಾಯಿಲ ಜ್ಯೋತಿ ಆಸ್ಪತ್ರೆಯು ರೋಗಿಗಳನ್ನು ಸ್ವಂತ ಕುಟುಂಬದ ಸದಸ್ಯರಂತೆ ಕಂಡು ಅವರಿಗೆ ಸೇವೆ ಮಾಡುವವರು” ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ಆಶೀರ್ವಚನಗಳನ್ನು ನೀಡಿದ ಬಿಷಪ್ ಲಾರೆನ್ಸರವರು, “ಜನರು ದಾರಿಯಲ್ಲಿ ಎಲ್ಲ ನಿಯಮಗಳನ್ನು ಮರೆತು ಓಡಾಡುತಿದ್ದಾರೆ, ಆದುದರಿಂದ ಜಾಗ್ರತರಾಗಿ ವಾಹನ ಚಲಯಿಸ ಬೇಕು” ಎಂದು ಹೇಳಿದರು. “ಆಸ್ಪತ್ರೆಯಲ್ಲಿ ರೋಗದ ಸಮಯದಲ್ಲಿ ನಾವು ನಿಮ್ಮೊಂದಿಗಿದ್ದೇವೆ. ಎಂಬ ಮಾತು ತುಂಬಾ ಭರವಸೆ ನೀಡುವಂತಹದು, ಆ ನಿಟ್ಟಿನಲ್ಲಿ ಜನರ ಸೇವೆಗಾಗಿಯೇ, ಅವರ ಕಷ್ಟದಲ್ಲಿ ಜೊತೆ ನಿಲ್ಲುವ ಜ್ಯೋತಿ ಆಸ್ಪತ್ರೆಯು ಬೆಳ್ತಂಗಡಿಯ ಜನತೆಗೆ ಆಸರೆಯಾಗಿ ಬೆಳಗುತಿದೆ” ಎಂದರು.

“ಜ್ಯೋತಿ ಆಸ್ಪತ್ರೆಯು ಕೆ.ಎಂ.ಸಿ ಆಸ್ಪತ್ರೆಯೊಂದಿಗೆ ಸೇರಿ ಅಂತರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ನೀಡಲು ಮುಂದಾಗಿರುವುದು ಶ್ಲಾಘನೀಯ, ಅದರಲ್ಲೂ ತುಂಬು ಹೃದಯದಿಂದ ಜನ ಸೇವೆ ಮಾಡುವ ಜ್ಯೋತಿ ಆಸ್ಪತ್ರೆಯ ಧರ್ಮ ಭಗಿನಿಯರಿಂದ ಜ್ಯೋತಿ ಆಸ್ಪತ್ರೆಯು ಬೆಳಗಲಿ” ಎಂದು ಎಂ.ಎಲ್.ಸಿ ಪ್ರತಾಪ ಸಿಂಹ ನಾಯಕ್ ಹೇಳಿದರು.

“ಪ್ರೀತಿಯ ಮಾತುಗಳನ್ನಾಡುತ್ತಾ ರೋಗಿಗಳ ಶುಶ್ರೂಷೆ ಮಾಡುವ ಜ್ಯೋತಿ ಆಸ್ಪತ್ರೆಯೂ ನನ್ನ ಅನುಭವದಲ್ಲಿ ಕುಟುಂಬವೇ ಹೌದು” ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಹೇಳಿದರು. ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಓ ಪ್ರಿಯ ಚಾಕೋ, ಕೆ.ಎಂ.ಸಿ ಆಸ್ಪತ್ರೆಯ ಸಿ. ಈ. ಓ. ಸಾಘಿರ್ ಸಿದ್ಧಿಕಿ, ಕೆ.ಎಂ.ಸಿ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ತಜ್ಞರಾದ ಡಾ. ಜೀತು ರಾಧಾಕೃಷ್ಣನ್, ವಿಕಾರ್ ಪ್ರೊವಿನ್ಸಿಯಲ್ ಸಿಸ್ಟೆರ್ ರೀಜ, ಸಿಸ್ಟೆರ್ ಮೆರಿಟ್ ಮೊದಲಾದವರು ಮಾತನಾಡಿದರು.

ಬೆಳ್ತಂಗಡಿಯ ಜನತೆಗೆ ಜ್ಯೋತಿ ಆಸ್ಪತ್ರೆ ಉತ್ತಮ ಗುಣಮಟ್ಟದ ವೈದ್ಯಕೀಯ ಸಹಾಯಕ್ಕೆ ಸಜ್ಜವಾಗಿ ಲೋಕಾರ್ಪಣೆಗೊಂಡಿದೆ. -ಫಾ. ಸುನಿಲ್ ಐಸಾಕ್ ಪಿ. ಆರ್. ಓ ಬೆಳ್ತಂಗಡಿ, ಧರ್ಮಪ್ರಾಂತ್ಯ.

Exit mobile version