Site icon Suddi Belthangady

ಶಿಶಿಲ: ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

ಶಿಶಿಲ: ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯು ಮೇ. 6ರಂದು ಶಿಶಿಲದ ನಾಗನಡ್ಕ ಗಣೇಶ ಸಮುದಾಯ ಭವನದಲ್ಲಿ ನಡೆಯಿತು. ಮಾಸಿಕ ಸಭೆಯಲ್ಲಿ ಭಾಗವಹಿಸಿದ ತಾಲೂಕು ಯೋಜನಾಧಿಕಾರಿಗಳಾದ ಯಶೋಧರ ಉತ್ತಮ ಸೇವೆ ಸಲ್ಲಿಸುತ್ತಿರುವ ಘಟಕವನ್ನು ಅಭಿನಂದಿಸುತ್ತಾ ಮುಂದೆಯೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡಲು ವಿನಂತಿಸಿದರು.

ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜಯವಂತ ಪಟಗಾರ್ ಭಾಗವಹಿಸಿ, ಘಟಕವು ಇದುವರೆಗೆ ಮಾಡಿದ ಸೇವಾಕಾರ್ಯಗಳು, ಪಡೆದ ಭತ್ಯೆಗಳು ಹಾಗೂ ಸದಸ್ಯವಾರು ಹಾಜರಾತಿ ಬಗ್ಗೆ ದಾಖಲಾತಿ ಸಹಿತ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಘಟಕವು ಯಾವ ರೀತಿ ಕಾರ್ಯಾಚರಿಸಬೇಕೆಂಬ ಮಾಹಿತಿಯನ್ನು ನೀಡಿದರು.

ಇನ್ನೋರ್ವ ಯೋಜನಾಧಿಕಾರಿ ಕಿಶೋರ್, ಮಾದರಿ ತಂಡವಾಗಿ ಕಾರ್ಯಾಚರಿಸಲು ಉಪಯುಕ್ತ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ವಲಯ ಮೇಲ್ವಿಚಾರಕಿ ಶಶಿಕಲಾರವರು ಉಪಸ್ಥಿತರಿದ್ದರು. ರಮೇಶ ಬೈರಕಟ್ಟ ಸ್ವಾಗತಿಸಿದರು. ಸಂಯೋಜಕಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಕುಶಾಲಪ್ಪ ಗೌಡ ಧನ್ಯವಾದ ನೀಡಿದರು.

Exit mobile version