Site icon Suddi Belthangady

ಮೇ. 16: ಎಮ್.ಆರ್.ಪಿ.ಎಲ್ ಹಾಗೂ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಕ್ಕಿಂಜೆ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಹಾಗೂ ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆ – ಬೆಳ್ತಂಗಡಿ ತಾಲೂಕು, ದ ಕ. ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಜನಜಾತಿಯ ಗೌರವ ದಿವಸ್, ವನವಾಸಿ ಜನನಾಯಕ ಅಪ್ರತಿಮ ದೇಶಭಕ್ತ, ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಗೌರವ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣೆ ಶಿಬಿರ ಮೇ. 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1:30ರವರೆಗೆ ಸಮುದಾಯ ಭವನ ಬಾಂಜಾರಿನಲ್ಲಿ ನಡೆಯಲಿದೆ.

ಶಿಬಿರದ ಉಚಿತ ಸೌಲಭ್ಯಗಳು:
● ತಜ್ಞವೈದ್ಯರ (ಫಿಸಿಶಿಯನ್) ತಪಾಸಣೆ ಮತ್ತು ಸೂಕ್ತ ಸಲಹೆ.
● ರಕ್ತದೊತ್ತಡ (BP) ತಪಾಸಣೆ.
● ಹಿಮೋಗ್ಲೋಬಿನ್ (HB)ತಪಾಸಣೆ.
● ಮಧುಮೇಹ (RBS)ತಪಾಸಣೆ.
● ಇಸಿಜಿ (ECG).
● ಶ್ವಾಸಕೋಶದ ತಪಾಸಣೆ.
● ಜೀವನ ಶೈಲಿ ಮತ್ತು ಪಥ್ಯ ಆಹಾರ ಬಗ್ಗೆ ಸಮಾಲೋಚನೆ.

ಶಿಬಿರದಲ್ಲಿ ಭಾಗವಹಿಸುವ ಮುಖ್ಯ ತಜ್ಞವೈದ್ಯರು:
ಡಾ‌.ಮುರಳಿಕೃಷ್ಣ ಇರ್ವತ್ರಾಯ.
ಡಾ.ವಂದನಾ ಎಂ ಇರ್ವತ್ರಾಯ.
ಡಾ.ಅಲ್ಬಿನ್ ಜೋಸೆಫ್
ಡಾ.ಮೌಲ್ಯ.

ಹೆಚ್ಚಿನ ವಿವರಗಳಿಗೆ: 9483525100/8762540383

ಉದ್ಘಾಟನೆಯನ್ನು Chief General Manager – CB&CC MRPL ಮಂಗಳೂರಿನ ಡಾ. ರುಡಾಲ್ಫ್ ನೊರೊನ್ಹಾ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆಯ ಆಡಳಿತ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ವೈದ್ಯಕೀಯ ಅಧೀಕ್ಷಕರು ಡಾ.ವಂದನಾ ಎಂ. ಇರ್ವತ್ರಾಯ, ಗ್ರಾ. ಪಂ. ನೆರಿಯ ಸದಸ್ಯ ಅಶೋಕ್ ಬಿ.ಎಸ್., ನವೀನ್ ಬಿ.ಎಸ್ ಬಾಂಜಾರು ಉಪಸ್ಥಿತರಿರುವರು.

Exit mobile version