ಕಲ್ಮಂಜ: ಶ್ರೀ ಬದಿನಡೆ ಕ್ಷೇತ್ರ ಅಂತರಬೈಲು ಅಲೆಕ್ಕಿಯಲ್ಲಿ ಮೇ. 6ರಂದು ಬೆಳಿಗ್ಗೆ ಗಂಟೆ 7.30ಕ್ಕೆ ಪುಣ್ಯಾಹ ಬೆಳಿಗ್ಗೆ ಗಂಟೆ 8.30ಕ್ಕೆ ಧರ್ಮಸ್ಥಳದ ತಾಂತ್ರಿಗಳಾದ ವೇದಮೂರ್ತಿ ಶ್ರೀ ವಿಷ್ಣುಮೂರ್ತಿ ಹೆಬ್ಬಾರ್ ಮುಂಡ್ರುಪ್ಪಾಡಿ ಇವರ ಮಾರ್ಗದರ್ಶನದಲ್ಲಿ ಕಲ್ಮಂಜ ಶ್ರೀ ಅನಂತೇಶ ಚಡಗರವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಮುಷ್ಟಿಕಾಣಿಕೆ, ಖನನಾದಿ, ಸಪ್ತಶುದ್ಧಿ, ಗಣಹೋಮ, ದೀಪ ಜಲಾಧಿವಾಸ, ಭೂವರಾಹ ಹೋಮ ನಡೆಯಿತು. ಅಧ್ಯಕ್ಷರಾಗಿ ತುಕಾರಾಮ್ ಸಾಲಿಯಾನ್, ಕಾರ್ಯದರ್ಶಿಯಾಗಿ ಸುನೀಲ್ ಕನ್ಯಾಡಿ, ಮತ್ತಿತರ ಗಣ್ಯರು, ಊರಿನ ನೂರಾರು ಜನರು ಭಾಗವಹಿಸಿದ್ದರು. ಸಾಯಂಕಾಲ ಗಂಟೆ 6ಕ್ಕೆ ಪುಣ್ಯಾಹ, ಅಘೋರ ಹೋಮ, ಬಾಧಾಕರ್ಷಣೆ, ಉಚ್ಚಾಟನೆ, ಅಘೋರ ಬಲಿ ನಡೆಯಲಿದೆ.
ಕಲ್ಮಂಜ: ಶ್ರೀ ಬದಿನಡೆ ಕ್ಷೇತ್ರದಲ್ಲಿ ಪೂಜಾ ಕಾರ್ಯ ಆರಂಭ
