Site icon Suddi Belthangady

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅಳದಂಗಡಿ ಸ. ಪ್ರೌ. ಶಾಲೆಗೆ 98.75%

ಅಳದಂಗಡಿ: ಸರ್ಕಾರಿ ಪ್ರೌಢ ಶಾಲೆಯ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳು 98.75% ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 80 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳು ಸತತವಾಗಿ 98.75% ಫಲಿತಾಂಶ ನೀಡಿ ಶಾಲೆಗೆ ಹೆಮ್ಮೆಯ ಕೊಡುಗೆ ನೀಡಿದ್ದಾರೆ. ಸುಜನ್ ಭಂಡಾರಿ -611(97.7%) ಪ್ರಥಮ ಸ್ಥಾನ, ಅನನ್ಯ – 609 (97.44%) ದ್ವಿತೀಯ ಸ್ಥಾನ ಹಾಗೂ ವೈಭವಿ – 596 (95.36%) ತೃತೀಯ ಸ್ಥಾನ ಪಡೆದಿದ್ದಾರೆ.

Exit mobile version