ವೇಣೂರು: ಪಡ್ಡಂದಡ್ಕ ಬಲ್ಲಂಗೇರಿ ನಿವಾಸಿ ಕೃಷಿಕ ಅಬ್ದುಲ್ ಹಮೀದ್ (55 ವರ್ಷ) ಮೇ. 5ರಂದು ತನ್ನ ಸ್ವಗೃಹದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಅವರು ಅಂಗರ ಕರಿಯ ಜುಮ್ಮಾ ಮಸೀದಿಯ ಕೋಶಾಧಿಕಾರಿಯಾಗಿದ್ದು, ಅಲ್ಲದೆ ಸ್ಥಳೀಯ ಪುಲಾಬೆ ಮದ್ರಸದ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಪಡ್ಡಂದಡ್ಕ ಬಲ್ಲಂಗೇರಿ ನಿವಾಸಿ ಅಬ್ದುಲ್ ಹಮೀದ್ ನಿಧನ
