ಗುರುವಾಯನಕೆರೆ: ನೀಟ್, ಜೆ ಇ ಇ , ಸಿ ಇ ಟಿ , ಎನ್ ಡಿ ಎ, ನಾಟಾ, ಬಿಎಸ್ಸಿ ಅಗ್ರಿ, ಸೇರಿದಂತೆ ವಿಜ್ಞಾನ ಶಿಸ್ತಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ದೇಶದ ಶೈಕ್ಷಣಿಕ ಭೂಪಟದಲ್ಲಿ ಅನನ್ಯ ಸ್ಥಾನ ಗಳಿಸಿಕೊಂಡ, ದಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ.
ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿರುವ ಎಕ್ಸೆಲ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ. ಎ., ಸಿ. ಎಸ್., ಕ್ಲಾಟ್ ಕೋಚಿಂಗ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಣಿತರಿಂದ ಕೋಚಿಂಗ್ ದೊರೆಯುತ್ತಿದೆ. ಅತ್ಯಾಧುನಿಕ ತರಗತಿ ಕೋಣೆಗಳು, ಆಧುನಿಕ ಸಲಕರಣೆಗಳಿರುವ ಪ್ರಯೋಗಾಲಯಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಾಮರ್ಶನ ಮಾಡುವ ಗ್ರಂಥಾಲಯ, ಇ ಲೈಬ್ರೆರಿ, ತನ್ನದೇ ಸ್ಟಡಿ ಮೆಟೀರಿಯಲ್ ಎಕ್ಸೆಲ್ ನ ವೈಶಿಷ್ಟ್ಯಗಳಲ್ಲಿ ಕೆಲವು.
ದಕ್ಷಿಣ ಭಾರತದ ಸುಪ್ರಸಿದ್ಧ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿರುವ 10 ರಿಂದ 30 ವರ್ಷಗಳ ತನಕದ ಬೋಧನಾನುಭವ ಇರುವ ಪ್ರಾದ್ಯಾಪಕ ವೃಂದ ಎಕ್ಸೆಲ್ ನ ನಿಜವಾದ ಶಕ್ತಿ. ಯಾರಿಗೂ ತಾರತಮ್ಯ ಮಾಡದೆ, ಅವಕಾಶ ಕೋರಿದ ಎಲ್ಲರಿಗೂ ಸೀಟ್ ನೀಡಿಯೂ ಎಲ್ಲಾ ಪರೀಕ್ಷೆಗಳಲ್ಲಿ ಎಕ್ಸೆಲ್ ಅದ್ವಿತೀಯವಾಗಿ ಗುರುತಿಸಿಕೊಂಡಿದ್ದು ಸಾಮರ್ಥ್ಯವೇ ಆಗಿದೆ.
ಹಾಸ್ಟೆಲ್ ಗಳಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ ನಿಲಯಪಾಲಕರು, ಎಸ್. ಡಬ್ಲ್ಯೂ. ಒ., ಶಿಸ್ತು ಪಾಲನಾಧಿಕಾರಿಗಳು ಇರುವುದರಿಂದ ಎಕ್ಸೆಲ್ ನಲ್ಲಿ ಶಿಸ್ತು ಭಂಗವಾಗುವ ಸಾಧ್ಯತೆಯೇ ಇಲ್ಲ.. ಅಟ್ಯಾಚ್ಡ್ ಬಾತ್ ರೂಮ್, 24×7 ಬಿಸಿ ನೀರಿನ ವ್ಯವಸ್ಥೆ, ನಿಯಮಿತವಾಗಿ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವ ಅವಕಾಶ, ಕ್ಯಾಂಪಸ್ ನಲ್ಲಿಯೇ ವೈದ್ಯಕೀಯ ಸೌಲಭ್ಯ, ಪ್ರತಿನಿತ್ಯ 6 ಗಂಟೆಗಳ ವೈಯಕ್ತಿಕ ಓದಿನ ಸಮಯ, ಆಪ್ತ ಸಮಾಲೋಚನಾ ವಿಭಾಗ, ಡೌಟ್ ಕ್ಲಿಯರ್ ಸೆಷನ್ಸ್ ಹೀಗೆ ಎಕ್ಸೆಲ್ ಹಾಸ್ಟೆಲ್ ನ ವ್ಯವಸ್ಥೆ ಅಧ್ಯಯನಕ್ಕೆ ಪೂರಕವಾಗಿದೆ.
ಕಳೆದ ವರ್ಷ 4 ವಿದ್ಯಾರ್ಥಿಗಳನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ಏಮ್ಸ್ ಗೆ ಹಾಗೂ ನೂರಾರು ವಿದ್ಯಾರ್ಥಿಗಳನ್ನು ಶ್ರೇಷ್ಠ ಮೆಡಿಕಲ್ ಕಾಲೇಜುಗಳಿಗೆ, ಇಂಜಿನಿಯರಿಂಗ್ ಆಸಕ್ತರನ್ನು ಐ ಐ ಟಿ, ಎನ್ ಐ ಐ ಟಿ, ಐ ಐ ಐ ಟಿ ಗಳಿಗೆ ಕಳುಹಿಸಿರುವ ಎಕ್ಸೆಲ್, ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದ ಹತ್ತಾರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಮೆರಿಟ್ ಸೀಟ್ ಗಳನ್ನು ದೊರಕಿಸಿ ಕೊಟ್ಟಿದೆ.
ನಾಟಾ ಮೂಲಕ ಆರ್ಕಿಟೆಕ್ಚರ್, ಬಿಎಸ್ಸಿ ಅಗ್ರಿ ಮೂಲಕ ಪಾರ್ಮ್ ಸೈನ್ಸ್, ಎನ್ ಡಿ ಎ, ಫಾರೇನಿಕ್ ಸೈನ್ಸ್ ಸೇರಿ ವಿವಿಧ ಕೋರ್ಸ್ ಗಳಿಗೆ ಸಾವಿರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿ ಕಳುಹಿಸಿರುವ ಹಿರಿಮೆ ಎಕ್ಸೆಲ್ ನದು.
ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬ್ಯಾಚ್ ಹಾಗೂ ಬ್ಲಾಕ್ ಮಾಡಿ, ಸುತ್ತಮುತ್ತಲಿನ ಪರಿಸರಕ್ಕೆ ಕಾಲೇಜು ಬಸ್ ವ್ಯವಸ್ಥೆ ಕಲ್ಪಿಸಿ ಕೊಟ್ಟಿರುವ ಎಕ್ಸೆಲ್ ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ.
ಇದೀಗ 2025 – 26ನೇಯ ಸಾಲಿಗೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಿಗೆ ದಾಖಲಾತಿ ನಡೆಯುತ್ತಿದೆ.