Site icon Suddi Belthangady

ತೆಕ್ಕಾರಿನಲ್ಲಿ ಶಾಸಕ ಹರೀಶ್ ಪೂಂಜರಿಂದ ಮುಸ್ಲಿಂರ ನಿಂದನೆ ಹಿನ್ನೆಲೆ: ಮುಸ್ಲಿಂ ಮುಖಂಡರಿಂದ ‌ಪತ್ರಿಕಾಗೋಷ್ಠಿ

ಬೆಳ್ತಂಗಡಿ: ತೆಕ್ಕಾರು ಗೋಪಾಲಕೃಷ್ಣ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಭಾಷಣದಲ್ಲಿ ಬ್ಯಾರಿ ಸಮಾಜವನ್ನು ಹಿಯಾಳಿಸಿರುವುದನ್ನು ಖಂಡಿಸಿ ತಾಲೂಕಿನ ಮುಸ್ಲಿಂ ಮುಖಂಡರು ಬೆಳ್ತಂಗಡಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿದರು.

ಶಾಸಕರು ಮುಸ್ಲಿಂ ಸಮುದಾಯವನ್ನು ಬಹಳ‌ ನೀಚವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸತ್ಯಾಂಶ ಮುಂದಿಡಲು ಈ ಪತ್ರಿಕಾಗೋಷ್ಟಿ ಕರೆದಿದ್ದೇವೆ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ 144 ಸೆಕ್ಷನ್ ಇರುವಾಗ ಎರಡು ಧರ್ಮಗಳ ನಡುವೆ ಘರ್ಷಣೆ ಬರುವಂತೆ ಮಾತನಾಡಿದ್ದು ತಪ್ಪು. ಒಂದು ಸಮುದಾಯವನ್ನು ಈ ರೀತಿ ಹಿಯಾಳಿಸಿರುವುದು ತುಂಬಾ ನೋವು ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಖೇದ ವ್ಯಕ್ತಪಡಿಸಿದರು.

Exit mobile version