ಉಜಿರೆ: 26ನೇ ರಾಷ್ಟ್ರೀಯ ಯುವ ಟೆನ್ನಿಸ್ ವಾಲಿಬಾಲ್ ಪಂದ್ಯಾಟವು ಮೇ.3 ಮತ್ತು 4 ರಂದು ಒಡಿಶಾದಲ್ಲಿ ನಡೆಯಿತು. ಕರ್ನಾಟಕ ಮಹಿಳಾ ತಂಡವನ್ನು ಎಸ್. ಡಿ. ಎಂ ಕ್ರೀಡಾ ಸಂಘದ 7 ವಿದ್ಯಾರ್ಥಿನಿಗಳಾದ ಹೇಮಾ, ವರ್ಷ, ಜಾಸ್ಲಿನ್ ಜಾನೆಟ್, ತನು ಕೆ.ಸಿ. ಹೆಗ್ಡೆ, ಸಾಕ್ಷಿ ಗುಪಿತ್, ಸ್ಮಿತಾ, ಸಿಂಪನಾ ಇವರು ಪ್ರತಿನಿಧಿಸಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಇವರಿಗೆ ರಮೇಶ್ ಹೆಚ್., ಸಂದೇಶ ಪೂಂಜ ತರಬೇತಿಯನ್ನು ನೀಡಿರುತ್ತಾರೆ. ಹಾಗೂ ಇವರ ಸಾಧನೆಗೆ ಎಸ್. ಡಿ. ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಪ್ರಾಂಶುಪಾಲರು, ಕ್ರೀಡಾ ಸಂಘದ ಕಾರ್ಯದರ್ಶಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ತರಬೇತುದಾರರು, ನಿರ್ದೇಶಕರು ಸಾಧನೆಗೆ ಅಭಿನಂದಿಸಿದ್ದಾರೆ.