ಸುಲ್ಕೇರಿ: ಶ್ರೀರಾಮ ಪ್ರೌಢ ಶಾಲೆಯ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳು 88.63% ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 44 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಿದ್ಯಾರ್ಥಿಗಳು ಸತತವಾಗಿ 97.29% ಫಲಿತಾಂಶ ನೀಡಿ ಶಾಲೆಗೆ ಹೆಮ್ಮೆಯ ಕೊಡುಗೆ ನೀಡಿದ್ದಾರೆ. ಹರ್ಷಿತ 600 (96%) ಪ್ರಥಮ ಸ್ಥಾನ, ಕಿರಣ್ ಆಚಾರ್ಯ 597 (95.52%) ದ್ವಿತೀಯ ಸ್ಥಾನ ಹಾಗೂ ಸಿಂಚನ ಪಿ. 586 (93.76%) ತೃತೀಯ ಸ್ಥಾನ ಪಡೆದಿದ್ದಾರೆ.
ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಸುಲ್ಕೇರಿ ಶ್ರೀರಾಮ ಪ್ರೌಢ ಶಾಲೆಗೆ 88.63% ಫಲಿತಾಂಶ
