ಧರ್ಮಸ್ಥಳ: ಇಲ್ಲಿನ ಜೋಡುಸ್ಥಾನದ ನಿವಾಸಿ ಗೋವಿಂದ ಗೌಡರ ಪ್ರಥಮ ಪುತ್ರ ಪ್ರಥಮ್ (15ವ) ಮೇ .4ರಂದು m ಧ್ಯಾಹ್ನ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಟವಾಡುತ್ತಿದ್ದ ವೇಳೆ ಹೃದಯಾಘಾತವಾಗಿದ್ದು,ಕೂಡಲೇ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಪ್ರಥಮ್ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮಾಹಿತಿ ದೊರಕಿದೆ. ಇತ್ತೀಚೆಗೆ 9ನೇ ಕ್ಲಾಸಿನಿಂದ ಹತ್ತನೇ ತರಗತಿಗೆ ತೇರ್ಗಡೆಗೊಂಡಿದ್ದರು.