ನಡ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ತಿರುಪತಿ ಅರ್ಚಕ ಡಾ.ಎನ್. ತನುಜಾ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದ ಕುಮಾರ್ ನೇತೃತ್ವದಲ್ಲಿ
ಮೇ.3ರಂದು ಸಂಜೆ 5-30ಕ್ಕೆ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ದೇವರ ಮೂರ್ತಿಗೆ ಸಾಮೂಹಿಕ ಪೂಜೆ ಸಲ್ಲಿಸಿ ವಿವಿಧ ಭಜನ ತಂಡ, ಚೆಂಡೆ, ವಾದ್ಯ, ಬ್ಯಾಂಡ್, ಸಾರ್ವಜನಿಕರ ಒಟ್ಟು ಸೇರಿಗೆಯಲ್ಲಿ ಭವ್ಯವಾದ ಮೆರವಣಿಗೆಯು ವಾಹನ ಜಾಥಾ ಮತ್ತು ಪಾದಯಾತ್ರೆಯ ಮೂಲಕ ನಡೆಯಿತು.
ಸಂಜೆ ಲಕ್ಷ್ಮೀನರಸಿಂಹ ಭಜನಾ ಮಂದಿರದ ವಠಾರದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.
ಶ್ರೀನಿವಾಸ ಕಲ್ಯಾಣೋತ್ಸವ ಅಧ್ಯಕ್ಷ ಡಾ.ಪ್ರದೀಪ್ ನಾವೂರು, ಪ್ರಧಾನ ಕಾರ್ಯದರ್ಶಿ ಕರುಣಾಕರ ಗೌಡ, ಕೋಶಾಧಿಕಾರಿ ಪುರುಷೋತ್ತಮ ಶೆಣೈ, ಚೆನ್ನಕೇಶವ ಗೌಡ ಭೋಜಾರ, ಉಪಾಧ್ಯಕ್ಷ ಅಜಿತ್ ಕುಮಾರ್ ಅರಿಗ, ಪ್ರಧಾನ ಸಂಚಾಲಕ ನವೀನ್ ನೆರಿಯ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮಜ್ದೂರ್ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ವಕೀಲ ಬಿ.ಕೆ ಧನಂಜಯ್ ರಾವ್, ಸುಭಾಶ್ಚಂದ್ರ ನಡ, ಪುಷ್ಪರಾಜ್ ಶೆಟ್ಟಿ, ವಸಂತ ಶ್ರದ್ಧಾ , ಬಂಗಾಡಿ ಸಿ ಎ ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಮೊದಲಾದವರು ಉಪಸ್ಥಿತರಿದ್ದರು.