ಬೆಳ್ತಂಗಡಿ: ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ಪ್ರತಿಷ್ಠಾ ಮಹೋತ್ಸವ ಮೇ. 4ರಿಂದ 8ರವರೆಗೆ ನೀಲೇಶ್ವರ ಬ್ರಹ್ಮಶ್ರೀ ವೇ.ಮೂ.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡ್ವೆಟ್ನಾಯ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಮೇ.4ರಂದು ಸಂಜೆ 4 ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ, ಜಾತ್ರಾ ಮಹೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ರಾತ್ರಿ 7.30 ರಿಂದ ಭಜನೆ ಹಾಗೂ ಯಕ್ಷಗಾನ ನಡೆಯಲಿದೆ.
ಮೇ.5ರಂದು ಬೆಳಿಗ್ಗೆ 7 ರಿಂದ ಗಣಪತಿ ಹೋಮ, ಬಿಂಬಶುದ್ಧಿ, ಸ್ಥಾನ ಶುದ್ಧಿ, ನಿತ್ಯ ಪೂಜೆ, ಉತ್ಸವ ಬಲಿ ಜರಗಲಿದೆ. ಸಂಜೆ 6 ರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ನಂತರ ಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ, ನಿತ್ಯಬಲಿ ನಡೆಯಲಿದೆ. ರಾತ್ರಿ 8 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಮೇ.6ರಂದು ಬೆಳಿಗ್ಗೆ ಶಿವ ಸಹಸ್ರನಾಮ ಪಠಣ ಮಧ್ಯಾಹ್ನ ಮಹಾಪೂಜೆ, ರಾತ್ರಿ 9 ರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುಸಸ್ಕೃತ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ.
ಮೇ.7ರಂದು ಬೆಳಿಗ್ಗೆ ಮಹಾಭಿಷೇಕ, ಮಂಜುಕುಂಡದಿಂದ ಕುಂಭಜಲ ತರುವುದು, ಮದ್ಯಾಹ್ನ ಮಹಾಪೂಜೆ, ಸಂಜೆ 6 ರಿಂದ ಕಮ್ಮಟ ಭಜನೆ, ರಾತ್ರಿ 7 ರಿಂದ ದೋಸೆ ಹಬ್ಬ, ರಾತ್ರಿ 9 ರಿಂದ ಸುಡುಮದ್ದು ಪ್ರದರ್ಶನ ನಡೆಯಲಿದೆ.
ಮೇ.8ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ, ಬೆಳಿಗ್ಗೆ 11ರಿಂದ ಧ್ವಜಾವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.