ಬೆಳ್ತಂಗಡಿ: 2024-25ನೇ ಸಾಲಿನ ಎಸ್. ಎಸ್. ಎಸ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆಯನ್ನು ಮಾಡಿರುತ್ತಾರೆ. ಸಾನಿಧ್ಯ ರಾವ್ 624 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಒಟ್ಟು 12 ವಿದ್ಯಾರ್ಥಿಗಳು ರಾಜ್ಯದ ಮೊದಲ 10 ರ‍್ಯಾಂಕ್‌ಗಳನ್ನು ಪಡೆದಿರುವುದು ಸಂಸ್ಥೆಯ ಸಂಸ್ಕಾರಭರಿತ ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ಸಾಧನೆಗೆ ಕೈಗನ್ನಡಿಯಾಗಿರುತ್ತದೆ.
ನಾರಾವಿಯ ವಸಂತ್ ಕುಮಾರ್ ಮತ್ತು ಸೌಜನ್ಯ ಇವರ ಪುತ್ರಿ ಸಾನಿಧ್ಯ ರಾವ್( 624 ) ರಾಜ್ಯಕ್ಕೆ ಎರಡನೆಯ ಸ್ಥಾನ, ದಾವಣಗೆರೆಯ ಗಿರೀಶ್ ಜಿ.ಹೆಚ್ ಮತ್ತು ರಾಜೇಶ್ವರಿ ಟಿ ಇವರ ಪುತ್ರ ಭರತ್ ಜಿ ಗೌಡ(623) ಮೂರನೇಯ ಸ್ಥಾನ, ಮೈಸೂರಿನ ಗಿರೀಶ್ ಹೆಚ್ ಪಿ ಮತ್ತು ತ್ರಿವೇಣಿ ಎಮ್.ಆರ್ ಅವರ ಮಗಳಾದ ಮಂಗಳಾ ಜಿ(622) ಹಾಗೂ ಬೆಂಗಳೂರಿನ ಬಸವರಾಜು ಕೆ ಎನ್ ಮತ್ತು ಗಾಯತ್ರಿ ವಿ ಅವರ ಮಗನಾದ ಅಖಿಲೇಶ್ ಕೆ.ಬಿ(622) ನಾಲ್ಕನೇ ಸ್ಥಾನ, ರಾಮನಗರ ಜಿಲ್ಲೆಯ ಸತೀಶ್ ಮತ್ತು ಮಮತಾ ಇವರ ಮಗಳಾದ ಪರಿಣಿತ ಹೆಚ್.ಎಸ್(621) ಐದನೇ ಸ್ಥಾನ, ಚಿಕ್ಕಮಗಳೂರಿನ ಮಂಜು ಜೆ ಮತ್ತು ಸುಧಾ ಇವರ ಮಗಳಾದ ಕೃತಿಕಾ ಎಮ್ (618) ಹಾಗೂ ಬೆಂಗಳೂರಿನ ಮಂಜುನಾಥ್ ಹಾಗೂ ಲೀಲಾವತಿ ಇವರ ಮಗಳಾದ ತೀಕ್ಷ್ಣ ಎಮ್ (618) ಎಂಟನೇ ಸ್ಥಾನ, ಮೂಡಬಿದಿರೆಯ ಮಹಾವೀರ ಹೆಗ್ಡೆ ಮತ್ತು ಅರ್ಚನಾ ಇವರ ಮಗನಾದ ಮಂಥನ್ ಜೈನ್(617) ಹಾಗೂ ಯಾದಗಿರಿ ಜಿಲ್ಲೆಯ ರುದ್ರಗೌಡ ಪಾಟೀಲ್ ಹಾಗೂ ಸುನೀತ ಪಾಟೀಲ್ ಇವರ ಮಗನಾದ ಅಭಿಷೇಕ್ ಆರ್ ಪಾಟೀಲ್ (617) 9ನೇ ಸ್ಥಾನ, ಮೂಡಬಿದಿರೆಯ ನಿರಂಜನ ಮತ್ತು ಸೌಮ್ಯ ಇವರ ಮಗನಾದ ನಿಶಾಂತ್ ಎ (616), ತುಮಕೂರಿನ ಹರೀಶ್ ಮತ್ತು ಕಾಮಾಕ್ಷಿ ಇವರ ಮಗಳಾದ ನಿತ್ಯಾ ಆರ್ ಹೆಚ್ (616), ಬೆಂಗಳೂರಿನ ಶಿವಲಿಂಗೇಗೌಡ ಮತ್ತು ಶೋಭಾ ಇವರ ಮಗಳಾದ ರೋಶಿನಿ ಎಸ್(616) ಹತ್ತನೇ ಸ್ಥಾನವನ್ನು ಪಡೆಸಿದ್ದಾರೆ.
ಶೇಕಡಾ 100 ಫಲಿತಾಂಶದೊಂದಿಗೆ ಹಾಜರಾದ ಒಟ್ಟು 196 ವಿದ್ಯಾರ್ಥಿಗಳಲ್ಲಿ 43 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳು, 107 ವಿದ್ಯಾರ್ಥಿಗಳು ಶೆಕಡಾ 90ಕ್ಕಿಂತ ಹೆಚ್ಚು ಮತ್ತು 142 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಕನ್ನಡ 49 ವಿದ್ಯಾರ್ಥಿಗಳು, ಸಂಸ್ಕೃತ-20 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ 17 ವಿದ್ಯಾರ್ಥಿಗಳು, ಗಣಿತ 15 ವಿದ್ಯಾರ್ಥಿಗಳು, ಹಿಂದಿ-15 ವಿದ್ಯಾರ್ಥಿಗಳು, ವಿಜ್ಞಾನ 5 ವಿದ್ಯಾರ್ಥಿಗಳು ಮತ್ತು ಪ್ರಥಮ ಭಾಷೆ ಇಂಗ್ಲೀಷ್ 2 ವಿದ್ಯಾರ್ಥಿಗಳು ವಿಷಯವಾರು 100ಕ್ಕೆ100 ಅಂಕಗಳನ್ನು ಪಡೆದು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ.
ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೊಪಾಧ್ಯಾಯ ಶಿವಪ್ರಸಾದ್ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
“ಎಕ್ಸಲೆಂಟ್ ಮೂಡುಬಿದಿರೆ ನನ್ನ ಮಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಿ ರಾಜ್ಯವೇ ಇಂದು ಗುರುತಿಸುವಂತೆ ಮಾಡಿದೆ. ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಶಿಕ್ಷಕ ವೃಂದದವರ ಸತತ ಪ್ರೋತ್ಸಾಹ ಹಾಗೂ ಮಗಳ ಕಠಿಣ ಪರಿಶ್ರಮ ಅವಳ ಸಾಧನೆಗೆ ಕಾರಣವಾಗಿರುತ್ತದೆ.” ವಸಂತ ರಾವ್, (ಸಾನಿಧ್ಯಳ ತಂದೆ)
“ಎಕ್ಸಲೆಂಟ್ ಶಾಲೆಗೆ ಸೇರಿದ ದಿನದಿಂದಲೂ ನನಗೆ ದೊರಕಿದ ಉತ್ತಮ ಕಲಿಕಾ ವಾತಾವರಣ ಹಾಗೂ ಅತ್ಯುತ್ತಮ ಶೈಕ್ಷಣಿಕ ಯೋಜನೆಯಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಇದರೊಂದಿಗೆ ಹೆತ್ತವರು ನೀಡಿದ ಬೆಂಬಲ, ಶಿಕ್ಷಕರ ಅತ್ಯುತ್ತಮ ಕಲಿಕಾ ವಿಧಾನಗಳು ನನ್ನನ್ನು ಇಂದು ಈ ಸ್ಥಾನದಲ್ಲಿರಲು ಪ್ರೇರಣೆಯಾಯಿತು. – ಸಾನಿಧ್ಯ ರಾವ್