ಕಳಿಯ: ಗೋವಿಂದೂರು ಪರಿಸರದಲ್ಲಿ ಎ. 30ರಂದು ಬೀಸಿದ ಬಿರುಗಾಳಿಗೆ ಕೃಷಿಗೆ ಹಾನಿಯಾದ ಘಟನೆ ನಡೆದಿದೆ.
ಕಳಿಯ ಗ್ರಾಮದ ಗೋವಿಂದೂರು ನಿವಾಸಿ ಪ್ರಶಾಂತ್ ಕೋಟ್ಯಾನ್ ಪಾದೆಗುತ್ತುರವರಿಗೆ ಸಂಬಂಧಿಸಿದ ತೋಟದಲ್ಲಿ ಸುಮಾರು 100ಕ್ಕೂ ಹೆಚ್ಚು ಅಡಿಕೆ ಮರ ಮುರಿದು ಬಿದ್ದಿದೆ.
ನಿರಂತರವಾಗಿ ಸುರಿದ ವಿಪರೀತ ಮಳೆಯಿಂದಾಗಿ ಅಡಿಕೆ, ತೆಂಗು ಇನ್ನಿತರ ಬೆಳೆಗಳ ಸ್ಥಿತಿಯ ಬಗ್ಗೆ ಆ ಭಾಗದ ಕೃಷಿಕರು ಆತಂಕದಲ್ಲಿದ್ದು, ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.