ಕಲ್ಮoಜ: ಗ್ರಾಮದ ಬದಿನಡೆ ಅಲೆಕ್ಕಿ ಎಂಬಲ್ಲಿ ಸುಮಾರು 400ರಿಂದ 500 ವರ್ಷಗಳ ಇತಿಹಾಸವಿರುವ ಕಾನಂಗು ಅರಣ್ಯದ ತಪ್ಪಲಿನಲ್ಲಿ ಕಾಡು ಪೊದೆಗಲ್ಲಿಂದ ಆವರಿಸಿ ಹಿಂದಿನ ಕಾಲದ ದೇವಸ್ಥಾನವಿದ್ದ ಕುರುಹುಗಳಿದ್ದು ಅಜೀರ್ಣಾವಸ್ಥೆಯಲ್ಲಿತ್ತು. ದೇವರ ಪ್ರೇರಣೆಯಿಂದ ಇದೀಗ ಊರವರೆಲ್ಲ ಸೇರಿಕೊಂಡು ಸಮಿತಿ ರಚನೆ ಮಾಡಿಕೊಂಡು ದೈವಜ್ಞರನ್ನು ಕರೆಸಿ ಪ್ರಶ್ನಾ ಚಿಂತನೆಯನ್ನು ನಡೆಸಿ ಮೇ. 6ರಿಂದ 9ರ ತನಕ ಪ್ರಾಯಶ್ಚಿತ್ತಾದಿ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ನಂತರ ಅಲ್ಲಿರುವ ದೇವಸ್ಥಾನ ಕುರುಹುಗಲಿರುವ ಸ್ಥಳಗಳನ್ನು ಶೋಧಿಸಿಕೊಂಡು ದೈವಜ್ಞರಿಂದ ಇನ್ನೊಮ್ಮೆ ಪ್ರಶ್ನೆಚಿಂತನೆ ನಡೆಸಿ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಕ್ಕೆ ಚಾಲನೆ ದೊರೆಯಲಿದೆ.
ಮೇ. 6ರಿಂದ ಕಲ್ಮಂಜ ಬದಿನಡೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಚಾಲನೆ
