ಬೆಳ್ತಂಗಡಿ: ಕೇಂದ್ರ ಸರಕಾರದ ವಿವಾದಿತ ವಕ್ಫ್ ತಿದ್ದುಪಡಿ ಕಾಯಿದೆಯ ವಿರುದ್ಧ ಬೆಳ್ತಂಗಡಿಯಲ್ಲಿ ವಕ್ಫ್ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ 2025ನೇ ಮೇ. 9ರಂದು ಮದ್ಯಾಹ್ನ 2:30ಗಂಟೆಗೆ ಬೆಳ್ತಂಗಡಿಯ ಬಸ್ಸು ನಿಲ್ದಾಣದ ಬಳಿಯಲ್ಲಿ ಶಾಂತಿಯುತ ಪ್ರತಿಭಟನಾ ಸಭೆಯನ್ನು ಪ್ರಮುಖ ಸಾದಾತುಗಳ ಮತ್ತು ಉಮರಾ ನಾಯಕರ ನೇತೃತ್ವದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.
ಕಳೆದ ಸಭೆಯಲ್ಲಿ ತೀರ್ಮಾನಿಸಿದಂತೆ ಪ್ರಮುಖ ಸಾದಾತುಗಳನ್ನು ಭೇಟಿ ಮಾಡಿದ ಬಗ್ಗೆ ಮತ್ತು ತಾಲೂಕಿನಲ್ಲಿ ಪ್ರಸಕ್ತ ನಡೆಯುತ್ತಿರುವ ವಿವಿದ ಪ್ರಕರಣಗಳ ಬಗ್ಗೆ ಸಮುದಾಯವನ್ನು ಟಾರ್ಗೆಟ್ ಮಾಡಿ ಶಾಂತಿ ಭಂಗದಂತಹ ಘಟನೆಗಳನ್ನು ಪೋಲಿಸ್ ವರಿಷ್ಠಾಧಿಕಾರಿಗಳನ್ನು ಬೇಟಿ ಮಾಡಿ ದೂರು ನೀಡಿದ ಬಗ್ಗೆ ಸಭೆಗೆ ವಿವರಿಸಲಾಯಿತು. ಸಭೆಯು ಸುಸೂತ್ರವಾಗಿ ನಡೆಯಲು ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಹಾಗೂ ಸಭೆಯ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಸಮಿತಿ ಸಂಚಾಲಕ ನವಾಝ್ ಶರೀಫ್, ಸದಸ್ಯರಾದ ನಝೀರ್ ಅಝ್ಹರಿ ಬೊಳ್ಮಿನಾರ್, ಅಝೀಝ್ ಜುಹ್ರಿ ಕಿಲ್ಲೂರು, ನಝೀರ್ ಬೆಳ್ತಂಗಡಿ, ಬಿ.ಎಂ.ಹಮೀದ್ ಉಜಿರೆ, ಖಾಲಿದ್ ಪುಲಾಬೆ, ಅಬ್ಬೋನು ಮದ್ದಡ್ಕ, ಅಬೂಬಕ್ಕರ್ ಸಿದ್ದೀಕ್ ಕಾಜೂರು, ಮಹಮ್ಮದ್ ಹನೀಫ್ ಉಜಿರೆ, ಅಬ್ದುಲ್ ರಝಾಕ್ ಕನ್ನಡಿ ಕಟ್ಟೆ, ನಿಸಾರ್ ಕುದ್ರಡ್ಡ, ಅಶ್ರಫ್ ಆಲಿಕುಂಙಿ, ಅಬ್ದುಲ್ ಕರೀಮ್ ಗೇರುಕಟ್ಟೆ, ಹನೀಫ್ ಪುಂಜಾಲ್ ಕಟ್ಟೆ, ಕೆ.ಎಸ್.ಅಬ್ದುಲ್ಲ ಕರಾಯ, ಜಮೀರ್ ಸಅದಿ, ಸಿರಾಜ್ ಚಿಲಿಂಬಿ, ಆಲಿಯಬ್ಬ ಫುಲಾಬೆ, ಖಾಲಿದ್ ಕಕ್ಯಾನ, ನಸೀಬ್ ಉಜಿರೆ ಹಾಜರಿದ್ದರು.