Site icon Suddi Belthangady

ಮಾಲಾಡಿ: ಡಾ. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ

ಮಾಲಾಡಿ: ಭಾರತರತ್ನ ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿಯ ವತಿಯಿಂದ ಎ. 27ರಂದು ಮಾಲಾಡಿ ಅಂಬೇಡ್ಕರ್ ಭವನದ ವಠಾರದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಮಾಲಾಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪುನೀತ್ ಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾಶಯ ಕೋರಿ, ಈ ಸಮಿತಿಯೊಂದಿಗೆ ಸದಾ ಸಹಕಾರ ನೀಡುತ್ತಾ ಜತೆಯಾಗಿ ಇರುವುದಾಗಿ ಹೇಳಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರರಾದ ಜನಾರ್ಧನ ಕೈಲಾರ, ಮಾಲಾಡಿ ಬೌದ್ಧ ಮಹಾಸಭದ ಅಧ್ಯಕ್ಷ ಸುನಿಲ್, ಮಹಿಳಾ ಸಮಿತಿಯ ಅಧ್ಯಕ್ಷ ಗುಲಾಬಿ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ‌ ಕ್ರಿಕೆಟ್, ತ್ರೋಬಾಲ್, ಹಗ್ಗಜಗ್ಗಾಟ ಹಾಗೂ ವಿವಿಧ ರೀತಿಯ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಅರವಿಂದ ಚೊಕ್ಕಾಡಿಯವರು ಮಾತಾಡಿ ವೈಚಾರಿಕ ಮಾತುಗಳನ್ನು ಕೇಳಲು ಜನ ಇಷ್ಟು ಹೊತ್ತಾದರೂ ಶಿಸ್ತು ಬದ್ದವಾಗಿ ಕುಳಿತಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಖುಷಿ ಇದೆ ಎಂದರು.‌

ಎಸ್.ವಿ.ಎಸ್ ಪ್ರೌಢಶಾಲೆಯ ಶಿಕ್ಷಕಿ ಪೂರ್ಣಿಮಾ ಶುಭ ಹಾರೈಸಿದರು. ವೇದಿಕೆಯಲ್ಲಿ ಪಿ.ಡಬ್ಲ್ಯೂ ಗುತ್ತಿಗೆದಾರ ಕೇಶವ ಅಳಕೆ ಉಪಸ್ಥಿತರಿದ್ದರು. ‌ಅಧ್ಯಕ್ಷ ಸುರೇಶ್ ರವರು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.‌ ಸುಶ್ಮಿತಾ ಸ್ವಾಗತಿಸಿ‌ದರು. ಸುನೀತಾ ನಿರೂಪಿಸಿ, ಶಾಲಿನಿ‌ ವಂದಿಸಿದರು.

Exit mobile version