Site icon Suddi Belthangady

ಲಾಯಿಲ ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ರಜತ ಮಹೋತ್ಸವ ಸಂಭ್ರಮ: ಶಾಲಾ ಆಡಳಿತ ಮಂಡಳಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ

ಬೆಳ್ತಂಗಡಿ: ಲಾಯಿಲದಲ್ಲಿ 2001ರಲ್ಲಿ ಪ್ರಾರಂಭವಾಗಿ ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ, ಸ್ಕೌಟ್ಸ್, ಗೈಡ್ಸ್ ಹಾಗೂ ಬುಲ್ ಬುಲ್ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿರುವ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಇದರ 25ನೇ ವರ್ಷದ ರಜತ ಮಹೋತ್ಸವ, ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ.

ಈ ಸಂಭ್ರಮದ ಪ್ರಯುಕ್ತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಶಾಲಾ ಆಡಳಿತ ಮಂಡಳಿ ಭೇಟಿಯಾಗಿ ಶಾಲಾ ಕಾರ್ಯ ವೈಖರಿಯನ್ನು ಹಾಗೂ ರಜತಾ ಮಹೋತ್ಸವ ಬೆಳ್ಳಿ ಹಬ್ಬದ ಪ್ರಯುಕ್ತ ರೂ. 1.50ಕೋಟಿ ವೆಚ್ಚದಲ್ಲಿ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಬಗ್ಗೆ ನಿರ್ಮಾಣವಾಗುತ್ತಿರುವ ಶಾಲಾ ಅಡಿಟೋರಿಯಂನ ಕೆಲಸ ಕಾರ್ಯದ ಮಾಹಿತಿಯನ್ನು ನೀಡಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಿಜಿ ಜಾರ್ಜ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ಪ್ರೀತಿ ಜಾರ್ಜ್, ಶಾಲಾ ಆಡಳಿತ ಅಧಿಕಾರಿ ಸಿ. ಮೇಲ್ವಿನ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ, ಆಡಳಿತ ಮಂಡಳಿ ಸದಸ್ಯ ಆಂಟನಿ ಫೆರ್ನಾಂಡಿಸ್, ಗ್ಯೂ ಗೋರಿಯಾ ಫೆರ್ನಾಂಡಿಸ್, ಕವಿತಾ, ಗಾಯತ್ರಿ, ವರ್ಣನ್ ರೋಡ್ರಿಗಸ್, ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಅಧ್ಯಾಪಕರು ಉಪಸ್ಥಿತರಿದ್ದರು.

Exit mobile version