ಉಜಿರೆ: ಮಹಿಳೆ ವೃತ್ತಿಯ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಯೊಂದಿಗೆ, ಸಮಾಜಕ್ಕೂ ತನ್ನಿಂದ ಸಹಾಯವಾಗಬೇಕೆನ್ನುವ ಮನೋಭಿಲಾಷೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ. ತನ್ನ ಸಮಯವನ್ನು ಸಮಾಜದ ಒಳಿತಿಗಾಗಿ ಮೀಸಲಿಡುತ್ತಾ ಇತರರ ಕಣ್ಣಿರು ಒರೆಸುವಂತಾದರೆ ಬದುಕು ಸಾರ್ಥಕ. ಇಂತಹ ಮಹಿಳೆಯರ ಸಾಲಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಅಗ್ರಗಣ್ಯರು. ಹಾಗೂ ನಮಗೆಲ್ಲಾ ಪ್ರೇರಕಶಕ್ತಿ ಎಂದು ಧೀಮತಿ ಜೈನ ಮಹಿಳಾ ಸಮಾಜ ಉಜಿರೆ ಇದರ ಮಾಸಿಕ ಸಭೆಯು ಏ. 29ರಂದು ಆಯೋಜಿಸಲಾಗಿತ್ತು. ‘ಸಮುದಾಯದ ಸಂಘಟನೆಯಲ್ಲಿ ಮಹಿಳೆಯರ ಪಾತ್ರ ‘ ಎಂಬ ವಿಷಯದ ಕುರಿತು ಕೊಕ್ಕಡ ಜೆ ಸಿ ಐ ಇದರ ಅಧ್ಯಕ್ಷರು ಹಾಗೂ ಎಸ್. ಡಿ. ಎಂ. ಐ ಟಿ ಇಲ್ಲಿನ ಸಹಾಯಕ ಪ್ರಾದ್ಯಾಪಕಿ ಡಾ. ಶೋಭಾ ಪಿ ಜೀವಂಧರ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳೆ ಆರ್ಥಿಕವಾಗಿ ಸಬಲೀಕರಣ ಹೊಂದುತ್ತಿರುವುದರ ಜೊತೆಗೆ ಸಮಾಜಮುಖಿಯಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಧೀಮತಿ ಜೈನ ಮಹಿಳಾ ಸಮಾಜ ದ ಅಧ್ಯಕ್ಷೆ ಡಾ.ರಜತ ಪಿ.ಶೆಟ್ಟಿ ಮಾತನಾಡಿ ವಿವಿಧ ಮನೋಸಾಮರ್ಥ್ಯವುಳ್ಳ ಮಹಿಳೆಯರು ಒಂದೆಡೆ ಸೇರಿ ಇಂಥಹ ಸಂಘಟನೆಗಳಲ್ಲಿ ತೊಡಗಿಸಿಕೊಂಡು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸೇವೆ ಹಾಗೂ ಕೊಡುಗೆಗಳನ್ನು ನೀಡುತ್ತಿರುವುದು ಪ್ರಶಂಸನೀಯ.ಧಾರ್ಮಿಕ, ಆರ್ಥಿಕ ಹಾಗೂ ಸಾಮಾಜಿಕ ಸಂಘಟನೆಗಳ ಮೂಲಕ ಸಮುದಾಯದ ಯಶಸ್ಸಿಗೆ ಮಹಿಳೆ ಸಹಕರಿಸುತ್ತಿರುಸುತ್ತಿರುವುದು ಅಭಿನಂದನೀಯ ಎಂದರು. ಮಹಿಳಾ ಸಮಾಜದ ಸದಸ್ಯೆರಾದ ಸ್ಮಿತಾ ಪ್ರಶಾಂತ್ ಹಾಗೂ ಐಶ್ವರ್ಯರಾಣಿ ಸಹಕರಿಸಿದರು. ದಿವ್ಯಾಕುಮಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಶಿಪ್ರಭಾ ಧನ್ಯಕುಮಾರ್ ವಂದಿಸಿದರು.