ಬೆಳಾಲು: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಮಂಜುನಾಥೇಶ್ವರ ನವಜೀವನ ಸಮಿತಿ ಬೆಳಾಲು – ಮಾಯ, ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಉಜಿರೆ – ಬೆಳಾಲು ಇವುಗಳ ಆಶ್ರಯದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ 41ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಎ. 29ರಂದು ಬೆಳಾಲು ಶ್ರೀ ಧ. ಮ. ಪ್ರೌಢ ಶಾಲೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ, ಕೃಷಿ ಅಧಿಕಾರಿ ರಾಮ್ ಕುಮಾರ್, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಬೆಳಾಲು ಶ್ರೀ ಧ. ಮ. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಜಯರಾಮ ಮಯ್ಯ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಬೆಳಾಲು ಸಹಕಾರ ಸಂಘದ ನಿರ್ದೇಶಕ ದಾಮೋದರ ಗೌಡ, ಸೀತಾರಾಮ ಬಿ. ಎಸ್., ಸುದ್ದಿ ಬಿಡುಗಡೆಯ ಜಾರಪ್ಪ ಪೂಜಾರಿ, ಧರ್ಮೇಂದ್ರ ಕುಮಾರ್ ಒಕ್ಕೂಟದ ವಲಯ ಅಧ್ಯಕ್ಷ ಉಮಾರಬ್ಬ, ವಲಯ ಮೇಲ್ವಿಚಾರಕಿ ವನಿತಾ, ಉಜಿರೆ ಒಕ್ಕೂಟದವಿಜಯ ಕುಮಾರ್, ದಿನೇಶ ಅಡ್ಡಾ ರು, ಸಾರ್ವಜನಿಕ ಸತ್ಯ ನಾರಾಯಣ ಪೂಜಾ ಸಮಿತಿಯ ಗೌರವಾಧ್ಯಕ್ಷ ಕೆ. ರತ್ನಾಕರ ಆಚಾರ್ಯ, ಅಧ್ಯಕ್ಷ ಸೂರಪ್ಪ ಗೌಡ, ಭಂಡಾರಿಮಜಲು, ಕಾರ್ಯದರ್ಶಿ ಧರ್ಣಮ್ಮ, ಜೊತೆ ಕಾರ್ಯದರ್ಶಿ ಪದ್ಮಾವತಿ ಮಣಿಕ್ಕಳ, ಕೋಶಾಧಿಕಾರಿ ಯೋಗೀಶ್ ಗೌಡ ಎಸ್., ಬೆಳಾಲು ಒಕ್ಕೂಟ ದ ಅಧ್ಯಕ್ಷ ರತ್ನಾಕರ ಆಚಾರ್ಯ, ಮಾಯ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲಿಯಾನ್, ಕೊಲ್ಪಾಡಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ, ವಲಯದ ಸೇವಾ ಪ್ರತಿನಿಧಿಗಳು, ಪೂಜಾ ಸಮಿತಿ ಮತ್ತು ಪ್ರಗತಿ ಬಂಧು ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು
ಊರಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಉಪಸ್ಥಿತರಿದ್ದರು.