Site icon Suddi Belthangady

ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 15ನೇ ಆರಾಧನಾ ಮಹೋತ್ಸವ

ಬೆಳ್ತಂಗಡಿ: ಶ್ರೀ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 15ನೇ ಆರಾಧನಾ ಮಹೋತ್ಸವ ಕಾರ್ಯಕ್ರಮ ಏ. 24ರಂದು ಹುಣ್ಸೆಕಟ್ಟೆಯ ಸಮುದಾಯ ಭವನದಲ್ಲಿ ಜರಗಿತು. ಓಂಕಾರ ಸುಪ್ರಭಾತದೊಂದಿಗೆ ಅಷ್ಟೋತ್ತರ ನಾಮಸ್ಮರಣೆ, ಭಜನಾ ಕಾರ್ಯಗಳು ಸಮಿತಿಯ ಸರ್ವರ ಸಹಕಾರದಿಂದ ಜರಗಿತು. ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ಸಮಿತಿಯ ಎಲ್ಲಾ ಸದಸ್ಯರು ನಾರಾಯಣ ಸೇವೆ ಮಾಡಲು ಸಹಕರಿಸಿದರು. ಸಮಿತಿಯ ಸಂಚಾಲಕ ಎ. ಕೃಷ್ಣಪ್ಪ ಪೂಜಾರಿ ಸ್ವಾಮಿಯ ಅವತಾರದ ದಿವ್ಯತೆಯ ಬಗ್ಗೆ ಸತ್ಸಂಗವನ್ನು ಮಾಡಿದರು. ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಭಾರತೀಯ ಸಹೋದರ ಸಹೋದರಿಯರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.

Exit mobile version