ಮುಂಡಾಜೆ: ನಿವೃತ್ತ ಲೆಫ್ಟಿನೆಂಟ್, ನಿವೃತ್ತ ಅಧ್ಯಾಪಕ, ಕೃಷಿ ತಜ್ಞ ಗಜಾನನ ವಝೆ (70) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಏ.30ರಂದು ನಿಧನ ಹೊಂದಿದರು. ಕೃಷಿಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಇವರು ಮನೆಯ ತೋಟದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳು, ತರಕಾರಿ ಸೇರಿದಂತೆ ಬೆಳೆಸಿದ್ದರು.
ಕೃಷಿಯ ಬಗ್ಗೆ ಅಪಾರ ಅನುಭವ ಹೊಂದಿದ್ದ ಇವರು ಹಲವರಿಗೆ ಕೃಷಿ ಬಗ್ಗೆ ಮಾಹಿತಿ ನೀಡುತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ಮುಂಡಾಜೆ ನಿವಾಸದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.