Site icon Suddi Belthangady

ಎರ್ನೋಡಿ ನಿವಾಸಿ ಅಮ್ಮು ಮೊಗೇರ ನಿಧನ

ಉಜಿರೆ: ಗ್ರಾಮದ ಎರ್ನೋಡಿ ಬಾಬು ಮೊಗೇರ ಅವರ ಸಹೋದರ ಅಮ್ಮು ಮೊಗೇರ (60 ವರ್ಷ) ಅಸೌಖ್ಯದಿಂದ ಎ.27ರಂದು ನಿಧನರಾದರು. ಅಮ್ಮು ಮೋಗೇರ ಅವರು ಕಳೆದ ಎರಡು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಮಂಗಳೂರು ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ಪತ್ನಿ ಅತ್ತಾಜೆ ಅಂಗನವಾಡಿ ಕಾರ್ಯಕರ್ತೆ ಗೋಪಿ, ಮಕ್ಕಳಾದ ದೀಕ್ಷಿತ್, ಶಮಿತ್ ಇವರನ್ನು ಅಗಲಿದ್ದಾರೆ.

Exit mobile version