Site icon Suddi Belthangady

ಬಿಹಾರ ಮೂಲದ ಯುವಕ ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಕೆಲಸಕ್ಕೆಂದು ಬಂದಿದ್ದ ಬಿಹಾರ ಮೂಲದ ಯುವಕ ನಂದಕುಮಾರ್(20) ಲಾಯಿಲದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಏ.27ರಂದು ಸಂಭವಿಸಿದೆ.

ತನ್ನ ಸಹೋದರನೊಂದಿಗೆ ಕೆಲಸಕ್ಕೆಂದು ಬಂದಿದ್ದ ಎನ್ನಲಾಗುತ್ತಿದೆ. ಮದ್ಯಾಹ್ನದ ವೇಳೆ ಉಜಿರೆ ಕಾಶಿಬೆಟ್ಟುವಿನಲ್ಲಿರುವ ಸಹೋದರನ ಬಾಡಿಗೆ ರೂಮಿನ ಕೀ ತೆಗೆದುಕೊಂಡು ಹೋದ ಯುವಕ ಮರಳಿ ಬರದಿದ್ದಾಗ ರೂಮಿಗೆ ಹೋಗಿ ಪರಿಶೀಲಿಸಿದಾಗ ಕೊಠಡಿಯ ಒಳಗಿನ ಫ್ಯಾನಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಕಡಿಕೊಂಡಿರುವುದು ಕಂಡು ಬಂದಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಬೆಳ್ತಂಗಡಿ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

Exit mobile version